Select Your Language

Notifications

webdunia
webdunia
webdunia
webdunia

ಪಿಪಿಎಫ್‌ ಹಣ ಮುಂಗಡವಾಗಿ ಪಡೆಯಬಹುದು ನಿಮಗೆ ಗೊತ್ತಾ?

ಪಿಪಿಎಫ್‌
ನವದೆಹಲಿ , ಮಂಗಳವಾರ, 21 ಜೂನ್ 2016 (18:25 IST)
ಸಾರ್ವಜನಿಕ ಭವಿಷ್ಯ ನಿಧಿ ಚಂದಾದಾರರು ಐದು ವರ್ಷಗಳ ಬಳಿಕ ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ತಮ್ಮ ಪಿಪಿಎಫ್ ಠೇವಣಿಯನ್ನು ಸಂಪೂರ್ಣವಾಗಿ ಹಿಂಪಡೆಯಬಹುದು ಎಂದು ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.
 
ಭವಿಷ್ಯ ನಿಧಿ ಚಂದಾದಾದರು ಮತ್ತು ಅಪ್ರಾಪ್ತರ ಪಿಪಿಎಫ್ ಖಾತೆಗೆ ಫೋಷಕರಾಗಿರುವವರು ತಮ್ಮ ಪತ್ನಿ ಅಥವಾ ಮಕ್ಕಳು ಅಥವಾ ಅವಲಂಬಿತರು ಗಂಭೀರವಾದ ರೋಗ ಅಥವಾ ಜೀವ ಬೆದರಿಕೆಯಿರುವಂತಹ ರೋಗಕ್ಕೆ ಚಿಕಿತ್ಸೆ ಪಡೆಯುವ ಸಂದರ್ಭ ಬಂದಾಗ, ಸೂಕ್ತ ವೈದ್ಯಕೀಯ ದಾಖಲೆಗಳನ್ನು ನೀಡಿ, ಪಿಪಿಎಫ್ ಖಾತೆಯನ್ನು ಸ್ಥಗಿತಗೊಳಿಸಬಹುದಾಗಿದೆ ಎಂದು ವಿತ್ತ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. 
 
ಒಂದು ವೇಳೆ ಠೇವಣಿದಾರರಿಗೆ ತಮ್ಮ ಪುತ್ರನ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಬೇಕಾದ ಸಂದರ್ಭದಲ್ಲಿ, ಪುತ್ರನು ದೇಶ ಅಥವಾ ವಿದೇಶದಲ್ಲಿ ಯಾವ ಸಂಸ್ಥೆಯಲ್ಲಿ ದಾಖಲಾತಿ ಪಡೆದಿರುವ ಬಗ್ಗೆ ದಾಖಲೆಗಳು ಮತ್ತು ಶುಲ್ದ ಪಾವತಿಯ ಸೂಕ್ತ ವಿವರಗಳನ್ನು ನೀಡಿದಲ್ಲಿ ಅವರು ಪಿಪಿಎಫ್ ಖಾತೆಯನ್ನು ಸ್ಥಗಿತಗೊಳಿಸಿ ಅದರಲ್ಲಿರುವ ಹಣವನ್ನು ಬಡ್ಡಿ ಸಮೇತವಾಗಿ ಪಡೆಯಬಹುದಾಗಿದೆ ಎಂದು ತಿಳಿಸಿದೆ.  
 
ಪಿಪಿಎಫ್ ಠೇವಣಿದಾರರು ತಮ್ಮ ಖಾತೆಯನ್ನು ತೆಗೆದು ಐದು ಆರ್ಥಿಕ ವರ್ಷಗಳ ನಂತರವಷ್ಟೆ ಖಾತೆಯನ್ನು ಸ್ಥಗಿತಗೊಳಿಸಬಹುದಾಗಿದೆ ಎಂದು ವಿತ್ತ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರುತಿ ಸುಜುಕಿ ಎಸ್‌-ಕ್ರಾಸ್‌ ಪೆಟ್ರೋಲ್ ಕಾರು ಶೀಘ್ರ ಮಾರುಕಟ್ಟೆಗೆ