Select Your Language

Notifications

webdunia
webdunia
webdunia
webdunia

ಮಾರುತಿ ಸುಜುಕಿ ಎಸ್‌-ಕ್ರಾಸ್‌ ಪೆಟ್ರೋಲ್ ಕಾರು ಶೀಘ್ರ ಮಾರುಕಟ್ಟೆಗೆ

ಮಾರುತಿ ಸುಜುಕಿ
ನವದೆಹಲಿ , ಮಂಗಳವಾರ, 21 ಜೂನ್ 2016 (18:20 IST)
ಕಳೆದ ವರ್ಷ ಭಾರತದ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾದ ಮಾರುತಿ ಸುಜುಕಿ ಎಸ್‌-ಕ್ರಾಸ್ ಆವೃತ್ತಿಯ ಕಾರುಗಳು, ಸೆಪ್ಟೆಂಬರ್ 2015ರಲ್ಲಿ ಕೇವಲ 1.3 ಲೀಟರ್ ಡಿಡಿಐಎಸ್ 200 ಮತ್ತು 1.6 ಲೀಟರ್ ಡಿಡಿಐಎಸ್ 320 ಡೀಸೆಲ್ ಇಂಜಿನ್‌ ಹೊಂದಿದ್ದ ಕಾರುಗಳು ಮಾರಾಟದಲ್ಲಿ ತೀವ್ರ ಹಿನ್ನಡೆ ಕಂಡಿದ್ದವು.
 
ಮಾರುತಿ ಸುಜುಕಿ ಎಸ್-ಕ್ರಾಸ್ ಕಾರುಗಳಿಗೆ ದುಬಾರಿ ಬೆಲೆ ನಿಗದಿಪಡಿಸಿದ್ದರಿಂದ ಕಾರುಗಳ ಮಾರಾಟದಲ್ಲಿ ಸತತ ಹಿನ್ನೆಡೆಯಾಗಿತ್ತು. ಆದ್ದರಿಂದ ಕಾರುಗಳ ಮಾರಾಟವನ್ನು ಹೆಚ್ಚಿಸಲು ಕಾರುಗಳ ದರದಲ್ಲಿ 2.05 ಲಕ್ಷ ರೂಪಾಯಿಗಳನ್ನು ಇಳಿಕೆಗೊಳಿಸಲಾಗಿದೆ.
 
ಮಾರುತಿ ಸುಜುಕಿ ಎಸ್-ಕ್ರಾಸ್ ಆವೃತ್ತಿಯ ಕಾರುಗಳು ಈಗ ತುಲನಾತ್ಮಕವಾಗಿ ಉತ್ತಮ ಪ್ರದರ್ಶನ ನೀಡುತ್ತಿವೆ. ಈ ಆವೃತ್ತಿಯ ಕಾರುಗಳನ್ನು ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಪೆಟ್ರೋಲ್ ಆವೃತ್ತಿಯ ಕಾರುಗಳನ್ನು ಬಿಡುಗಡೆ ಮಾಡಲಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ. 
 
ಮಾರುತಿ ಸುಜುಕಿ ಎಸ್‌-ಕ್ರಾಸ್ ಆವೃತ್ತಿಯ ಕಾರುಗಳು 1.5 ಲೀಟರ್ ಎಮ್-15 ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದ್ದು, 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 
 
ಪ್ರಸಕ್ತವಾಗಿ ಈ ಆವೃತ್ತಿಯ ಕಾರುಗಳ ಮಾರುಕಟ್ಟೆಯಲ್ಲಿ 8.03 ಲಕ್ಷ ರೂಪಾಯಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ 12.05 ಲಕ್ಷ ರೂಪಾಯಿಗಳಿಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಮಾರುತಿ ಸುಜುಕಿಯ ಎಸ್‌-ಕ್ರಾಸ್ ಪೆಟ್ರೋಲ್ ಎಂಜಿನ್ ಆವೃತ್ತಿಯ ಕಾರುಗಳ ದರವನ್ನು 7 ರಿಂದ 10 ಲಕ್ಷ ರೂಪಾಯಿಗಳಿಗೆ ಏರಿಕೆಯಾಗುವ ನಿರೀಕ್ಷೆಗಳಿವೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಮರ ಮನೆಗಳಿಗೆ ಹೋಗಿ ಖರ್ಗೆ ಬಣ್ಣ ಬಯಲು ಮಾಡ್ತೇನೆ: ಖಮರುಲ್