Publish Date: Sun, 26 Jan 2020 (14:17 IST)
Updated Date: Sun, 26 Jan 2020 (14:21 IST)
ಬೆಂಗಳೂರು: ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಖುಷಿಯ ಸಂಗತಿಯೊಂದನ್ನು ಬಿಡುಗಡೆ ಮಾಡಿದೆ. ವಾಟ್ಸಾಪ್ ಈಗ ಡಾರ್ಕ್ ಮೋಡ್ ಅನ್ನು ಬಿಡುಗಡೆ ಮಾಡಲಿದೆ.
ಈಗಾಗಲೇ ಫೇಸ್ ಬುಕ್ ಮೆಸೆಂಜರ್, ಇನ್ ಸ್ಟಾಗ್ರಾಂ ಆ್ಯಪ್ ಗಳಲ್ಲಿ ಡಾರ್ಕ್ ಮೋಡ್ ಚಾಲ್ತಿಯಲ್ಲಿದೆ. ಈಗ ವಾಟ್ಸಾಪ್ ಕೂಡ ಡಾರ್ಕ್ ಮೋಡ್ ಅನ್ನು ಬಿಡುಗಡೆ ಮಾಡಲಿದೆ.
ವಾಟ್ಸಾಪ್ ಅನ್ನು ಅಪ್ ಡೇಟ್ ಮಾಡಿಕೊಂಡರೆ ವಾಟ್ಸಾಪ್ ಡಾರ್ಕ್ ಮೋಡ್ ಸೌಲಭ್ಯವನ್ನು ಪಡೆಯಬಹುದು.ಕೆಲವು ಫೋನ್ ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ ಈ ಸೌಲಭ್ಯ ಇದೆ. ಶೀಘ್ರದಲ್ಲಿಯೇ ಇದು ಎಲ್ಲರಿಗೂ ಲಭ್ಯವಾಗಲಿದೆ.