Select Your Language

Notifications

webdunia
webdunia
webdunia
webdunia

ಶುಭ ಸುದ್ದಿ: ವಸತಿಯೋಜನೆ ವಿಳಂಬವಾದಲ್ಲಿ ಗ್ರಾಹಕರಿಗೆ ಶೇ11 ರಷ್ಟು ಬಡ್ಡಿ ನೀಡಲು ಬಿಲ್ಡರ್‌ಗಳಿಗೆ ಆದೇಶ

ಶುಭ ಸುದ್ದಿ: ವಸತಿಯೋಜನೆ ವಿಳಂಬವಾದಲ್ಲಿ ಗ್ರಾಹಕರಿಗೆ ಶೇ11 ರಷ್ಟು ಬಡ್ಡಿ ನೀಡಲು ಬಿಲ್ಡರ್‌ಗಳಿಗೆ ಆದೇಶ
ನವದೆಹಲಿ , ಬುಧವಾರ, 29 ಜೂನ್ 2016 (14:59 IST)
ನವದೆಹಲಿ: ಸ್ವಂತವಾದ ಮನೆಯನ್ನು ಹೊಂದಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ, ಮನೆಯನ್ನು ಖರೀದಿಸುವ ಆಸಕ್ತರು ಮುಂಗಡ ಹಣ ನೀಡಿದರೂ ಬಿಲ್ಡರ್‌ಗಳ ವಂಚನೆಯಿಂದ ಸರಿಯಾದ ಸಮಯಕ್ಕೆ ಅಪಾರ್ಟ್‌ಮೆಂಟ್ ದೊರೆಯದೆ ಕಂಗಾಲಾದ ಘಟನೆಗಳು ಸಾವಿರಾರು. ಆದರೆ, ಇದೀಗ ನಿಗದಿತ ಅವಧಿಯಲ್ಲಿ ಮನೆ ಗ್ರಾಹಕರ ವಶಕ್ಕೆ ನೀಡದಿದ್ದಲ್ಲಿ ಬಿಲ್ಡರ್‌ಗಳು ಶೇ.11 ರಷ್ಟು ಬಡ್ಡಿ ಹಣ ಪಾವತಿಸಬೇಕಾಗುತ್ತದೆ.
 
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ವಸತಿ ಯೋಜನೆಗಳನ್ನು ವಿಳಂಬ ಮಾಡುವ ಬಿಲ್ಡರ್‌ಗಳು ಗ್ರಾಹಕರಿಗೆ ಶೇ. 11 ರಷ್ಟು ಬಡ್ಡಿಯನ್ನು ಪಾವತಿಸ ಬೇಕಾಗುತ್ತದೆ ಎಂದು ತಿಳಿಸಿದೆ.
 
ಕಳೆದ ವಾರ, ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ತಂದು ವಸತಿ ಕಾಯ್ದೆ ಯೋಜನೆ ಅಡಿಯಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರ, ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರಡು ನಿಯಮಗಳನ್ನು ಅನಾವರಣಗೊಳಿಸಿದೆ.
 
ವಸತಿ ಯೋಜನೆ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ, ಕರುಡು ನಿಯಮಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಘಢ್, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಮತ್ತು ಲಕ್ಷದ್ವೀಪದ ಜನರಿಂದ ಎರಡು ವಾರಗಳಲ್ಲಿ ಆಕ್ಷೇಪಣೆ ಮತ್ತು ಸಲಹೆಗಳನ್ನು ನೀಡುವಂತೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
 
ಸಂಸತ್ ಪ್ರಸಕ್ತ ಸಾಲಿನ ಮಾರ್ಚ್ ತಿಂಗಳಲ್ಲಿ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಮಸೂದೆಯನ್ನು ಅಂಗೀಕರಿಸಿತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋಏರ್‌ ವಿಮಾನ ಸಂಸ್ಥೆಯಿಂದ ಮಾನ್ಸೂನ್ ಆಫರ್: ಕೇವಲ 849 ರೂ,.ಗಳಿಗೆ ಟಿಕೆಟ್ ಲಭ್ಯ