ಗೋಏರ್ ವಿಮಾನಯಾನದಲ್ಲಿ ಮಾನ್ಸೂನ್ ಬೊನಾಂಜಾ ಕೊಡುಗೆ ಮಳೆಯಂತೆ ಸುರಿಯುತ್ತಿದೆ! ಕಡಿಮೆ ದರದಲ್ಲಿ ವಿಮಾನ ಸೇವೆ ನೀಡುತ್ತಿರುವ ಗೋಏರ್, ತನ್ನ ಗ್ರಾಹಕರಿಗೆ ಮಾನ್ಸೂನ್ ಕೊಡುಗೆ ಸೇರಿದಂತೆ ಇತರ ಕೂಡುಗೆಗಳ ಬಂಪರ್ ಆಫರ್ ನೀಡಿದೆ.
ಕಡಿಮೆ ದರದ ವಿಮಾನ ಸೇವೆ ನೀಡುತ್ತಿರುವ ಗೋಏರ್ ಸಂಸ್ಥೆ, ತನ್ನ ಗ್ರಾಹಕರಿಗೆ ಭಾರಿ ರಿಯಾಯಿತಿಯನ್ನು ನೀಡುತ್ತಿದ್ದು, ಆರಂಭಿಕವಾಗಿ 849 ರೂಪಾಯಿ ಬೆಲೆಯಲ್ಲಿ ವಿಮಾನ ಟಿಕೆಟ್, ಉಪಹಾರ ಬುಕ್ಕಿಂಗ್ ಮೇಲೆ 60 ಪ್ರತಿಶತ ರಿಯಾಯಿತಿ, ಪೇಟಿಎಮ್ ಮೂಲಕ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ 10 ಪ್ರತಿಶತ ಕ್ಯಾಶ್ ಬ್ಯಾಕ್ ಮತ್ತು 200 ಬೆಲೆಯ ಕಾಫಿ ಡೇ ವೋಚರ್ ನೀಡಲಿದೆ.
ಜುಲೈ 1 ಮತ್ತು ಸೆಪ್ಟೆಂಬರ್ 30 ರಂದು ಪ್ರಯಾಣ ಮಾಡುವ ಗ್ರಾಹಕರು ಜೂನ್ 29 ಮತ್ತು ಜುಲೈ 2 ರಂದು ತಮ್ಮ ಪ್ರವಾಸದ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳುವ ಗ್ರಾಹಕರು ಈ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.
ಅದಾಗ್ಯೂ, ಈ ಯೋಜನೆಯಲ್ಲಿ ಬುಕ್ ಮಾಡುವ ಟಿಕೆಟ್‌ಗಳು ನಾನ್ ರಿಫಂಡೆಬಲ್ ಅಡಿಯಲ್ಲಿ ಬುಕ್ ಆಗುತ್ತಿದ್ದು, ಪ್ರಯಾಣವನ್ನು ರದ್ದುಗೊಳಿಸುವ ಗ್ರಾಹಕರಿಗೆ ಹಣ ಮರು ಸಂದಾಯ ಮಾಡಲಾಗುವುದಿಲ್ಲ ಎಂಬುದನ್ನು ಗ್ರಾಹಕರು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ