Webdunia - Bharat's app for daily news and videos

Install App

Gold Price today: ಅಬ್ಬಬ್ಬಾ... ಚಿನ್ನದ ದರದಲ್ಲಿ ಇಂದು ಮತ್ತೆ ಭಾರೀ ಏರಿಕೆ

Krishnaveni K
ಗುರುವಾರ, 10 ಏಪ್ರಿಲ್ 2025 (11:28 IST)
ಬೆಂಗಳೂರು: ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿ ಗ್ರಾಹಕರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಮತ್ತೆ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಎಷ್ಟು ಏರಿಕೆಯಾಗಿದೆ ಎಂಬ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಮೊನ್ನೆಯಂತೂ ಪರಿಶುದ್ಧ ಚಿನ್ನದ ಬೆಲೆ 94 ಸಾವಿರ ಗಡಿ ದಾಟಿ ದಾಖಲೆ ಮಾಡಿತ್ತು. ಆದರೆ ಕಳೆದ ಎರಡುದಿನಗಳಿಂದ ಕೊಂಚ ಮಟ್ಟಿಗೆ ಇಳಿಕೆಯಾಗಿತ್ತು. ಹೀಗಾಗಿ ಚಿನ್ನದ ದರ ಮತ್ತಷ್ಟು ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ಬೆಲೆ 91,205  ರೂ.ಗಳಿತ್ತು. ಇಂದು ಇದು 92,795 ರೂ.ಗಳಾಗಿವೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಭಾರೀ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 270 ರೂ. ಏರಿಕೆಯಾಗಿದ್ದು 8,560 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ 294 ರೂ. ಏರಿಕೆಯಾಗಿದ್ದು ಇಂದು 9,338 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 221 ರೂ. ಏರಿಕೆಯಾಗಿದ್ದು ಇಂದು ಗ್ರಾಂಗೆ 7,004 ರೂ. ರಷ್ಟಾಗಿದೆ.

ಬೆಳ್ಳಿ ದರ
ಆದರೆ ಬೆಳ್ಳಿ ದರದಲ್ಲಿ ನಿನ್ನೆ ಇಳಿಕೆಯಾಗಿತ್ತು. ಇಂದು ಮತ್ತೆ ದರ ಏರಿಕೆಯಾಗಿದೆ. ಇಂದು ಬೆಳ್ಳಿ ದರ 2,000 ರೂಗಳಷ್ಟು ಏರಿಕೆಯಾಗಿದ್ದು ಪ್ರತೀ ಕೆ.ಜಿ.ಗೆ 95,000 ರೂ.ಗೆ ಬಂದು ನಿಂತಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ರೈಲಿನಲ್ಲಿ ಮಹಿಳೆಯರ ಮುಂದೆ ನಿಂತು ಪ್ಯಾಂಟ್ ಜಿಪ್ ತೆರೆದು ನಿಂತ ಯುವಕ

ಮೈಸೂರಿಗೆ 5 ರೂ ಕೊಟ್ಟಿಲ್ಲ, ನಿಮ್ಮಪ್ಪ ರಾಜೀನಾಮೆ ಕೊಡ್ಲಿ: ಯತೀಂದ್ರಗೆ ಸಲಹೆ ಕೊಟ್ಟ ಪ್ರತಾಪ್ ಸಿಂಹ

Gold Price today: ಚಿನ್ನದ ಬೆಲೆ ಭಾರೀ ಏರಿಕೆ

ಸೋನಿಯಾ ಗಾಂಧಿ ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು

ಒಂದು ಶವಚೀಲದಲ್ಲಿ ಎರಡು ತಲೆ.. ನಮಗೆ ಪೂರ್ತಿ ದೇಹವೇ ಬೇಕು ಕುಟುಂಬಸ್ಥರ ಪಟ್ಟು

ಮುಂದಿನ ಸುದ್ದಿ
Show comments