Publish Date: Wed, 04 Feb 2026 (10:45 IST)
Updated Date: Wed, 04 Feb 2026 (10:47 IST)
ಬೆಂಗಳೂರು: ಕೇಂದ್ರ ಬಜೆಟ್ ಗೆ ಮುನ್ನ ಚಿನ್ನದ ದರ ಭರ್ಜರಿ ಇಳಿಕೆ ಕಂಡಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಇಳಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,52,060.00 ರೂ.ಗಳಿತ್ತು. ಇಂದೂ 1,56,850.00 ರೂ.ಗಳಷ್ಟಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಗಳು ಇಂದು ಮತ್ತೊಮ್ಮೆ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 660 ರೂ. ಏರಿಕೆಯಾಗಿದ್ದು 16,053 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 605 ರೂ ಏರಿಕೆಯಾಗಿದ್ದು 14,715 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂ.ಗೆ 495 ರೂ. ಏರಿಕೆಯಾಗಿದ್ದು 12,040 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಏರಿಕೆ-ಇಳಿಕೆಯಾಗುತ್ತಲೇ ಇದೆ. ಇಂದು ಬೆಳ್ಳಿ ದರ ಇಂದು 40,000 ರೂ. ಏರಿಕೆಯಾಗಿದೆ. ಪ್ರತೀ ಕೆ.ಜಿಗೆ ಬೆಳ್ಳಿ ದರ 3,20,000 ರೂ. ಗಳಷ್ಟಿದೆ.