Publish Date: Sat, 31 Jan 2026 (11:42 IST)
Updated Date: Sat, 31 Jan 2026 (11:48 IST)
ಬೆಂಗಳೂರು: ಚಿನ್ನದ ಬೆಲೆ ಮತ್ತೆ ಏರಿಕೆ ಮತ್ತು ಇಳಿಕೆಯಾಗುತ್ತಲೇ ಇದೆ. ಆದರೆ ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ಭಾರೀ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ವಾರ ಪರಿಶುದ್ಧ ಚಿನ್ನದ ದರ ಸತತ ಏರಿಕೆ ಮತ್ತು ಇಳಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಏರಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,84,050.00 ರೂ.ಗಳಿತ್ತು. ಇಂದು 1,70,280.00 ರೂ.ಗಳಷ್ಟಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಗಳು ಇಂದು ಭಾರೀ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 862 ರೂ.ಗಳಷ್ಟು ಇಳಿಕೆಯಾಗಿದ್ದು 16,058 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 790 ರೂ. ಇಳಿಕೆಯಾಗಿದ್ದು 14,720 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂ.ಗೆ 646 ರೂ.ಗಳಷ್ಟು ಇಳಿಕೆಯಾಗಿದ್ದು 12,044 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಏರಿಕೆ-ಇಳಿಕೆಯಾಗುತ್ತಲೇ ಇದೆ. ಇಂದು ಬೆಳ್ಳಿ ದರ ಇಂದು 45000 ರೂ.ಗಳಷ್ಟು ಇಳಿಕೆಯಾಗಿದೆ. ಪ್ರತೀ ಕೆ.ಜಿಗೆ ಬೆಳ್ಳಿ ದರ 3,50,000 ರೂ. ಗಳಷ್ಟಿದೆ.