Publish Date: Tue, 26 Aug 2025 (10:59 IST)
Updated Date: Tue, 26 Aug 2025 (11:00 IST)
ಬೆಂಗಳೂರು: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಇಂದು ಪರಿಶುದ್ಧ ಚಿನ್ನದ ದರ ದುಬಾರಿಯಾಗಿದ್ದರೆ ಇತರೆ ಚಿನ್ನದ ದರವೂ ಇಂದು ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ವಾರದ ಆರಂಭದಲ್ಲಿ ಚಿನ್ನದ ದರ ಇಳಿಕೆಯಾಗಿದ್ದು ಗ್ರಾಹಕರಿಗೆ ನೆಮ್ಮದಿ ತಂದಿತ್ತು. ಆದರೆ ಈಗ ಪರಿಶುದ್ಧಚಿನ್ನದ ದರ ಮತ್ತೆ ಏರುಗತಿಯಲ್ಲಿದೆ. ಇಂದು ಪರಿಶುದ್ಧ ಚಿನ್ನದ ದರದಲ್ಲಿ ಭಾರೀ ಏರಿಕೆಯಾಗಿದೆ. ನಿನ್ನೆ ಇತರೆ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿತ್ತು. ಆದರೆ ಇಂದು ಇತರೆ ಚಿನ್ನದ ದರವೂ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,03.430.00 ರೂ.ಗಳಷ್ಟಿತ್ತು. ಆದರೆ ಇಂದು ಕೊಂಚ ಏರಿಕೆ ಕಂಡಿದ್ದು, 1,03.550.00 ರೂ.ಗಳಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 55 ರೂ.ಗಳಷ್ಟು ಏರಿಕೆಯಾಗಿದ್ದು 10,206 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 50 ರೂ.ಗಳಷ್ಟು ಏರಿಕೆಯಾಗಿದ್ದು 9,355 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು 41 ರೂ.ಗಳಷ್ಟು ಏರಿಕೆಯಾಗಿದ್ದು 7,655 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿದರವಂತೂ ನಿನ್ನೆ ದಾಖಲೆಯ ಮಟ್ಟಿಕ್ಕೆ ಏರಿಕೆಯಾಗಿತ್ತು. ಆದರೆ ಇಂದು ಬೆಳ್ಳಿ ದರ ಪ್ರತಿ ಕೆ.ಜಿ.ಗೆ 1000 ರೂ.ನಷ್ಟು ಇಳಿಕೆಯಾಗಿದ್ದು 1,20,000 ರೂ. ಗಳಷ್ಟಿದೆ.