Publish Date: Sat, 19 Jul 2025 (11:08 IST)
Updated Date: Sat, 19 Jul 2025 (11:10 IST)
ಬೆಂಗಳೂರು: ಮೊನ್ನೆ ಎರಡು ದಿನ ಕೊಂಚ ಇಳಿಕೆಯಾಗಿದ್ದ ಚಿನ್ನದ ದರ ಇಂದು ದಿಡೀರ್ ಭಾರೀ ಏರಿಕೆಯಾಗಿದ್ದು ಗ್ರಾಹಕರಿಗೆ ಶಾಕ್ ನೀಡಿದೆ. ಇಂದು ಪರಿಶುದ್ಧು ಚಿನ್ನದ ದರ ಇಳಿಕೆಯಾಗಿದ್ದರೆ ಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಕೊಂಚವೇ ಇಳಿಕೆಯಾಗಿತ್ತು. ಆದರೆ ನಿನ್ನೆ ಸಣ್ಣಮಟ್ಟಿಗೆ ಏರಿಕೆಯಾಗಿತ್ತು. ಆದರೆ ಇಂದಂತೂ ವಿಪರೀತ ಏರಿಕೆಯಾಗಿದ್ದು ವಾರಂತ್ಯದಲ್ಲಿ ಗ್ರಾಹಕರಿಗೆ ಶಾಕ್ ನೀಡಿದಂತಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,00,560.00 ರೂ.ಗಳಷ್ಟಿತ್ತು. ಆದರೆ ಇಂದು ಮತ್ತೆ ಭಾರೀ ಏರಿಕೆಯಾಗಿದ್ದು 1,01,430.00 ರೂ.ಗಳಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 66 ರೂ.ಗಳಷ್ಟು ಏರಿಕೆಯಾಗಿದ್ದು 10,004 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 60 ರೂ.ಗಳಷ್ಟು ಏರಿಕೆಯಾಗಿದ್ದು 9,170 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 49 ರೂ.ಗಳಷ್ಟು ಏರಿಕೆಯಾಗಿದ್ದು 7,503 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ನಿನ್ನೆ ಸಾರ್ವಕಾಲಿಕ ಏರಿಕೆಯಾಗಿ ದಾಖಲೆಯ ಬೆಲೆಯಾಗಿತ್ತು. ಆದರೆ ನಿನ್ನೆ ಯಥಾಸ್ಥಿತಿಯಲ್ಲಿತ್ತು. ಇಂದು ಮತ್ತೆ ಭಾರೀ ಏರಿಕೆಯಾಗಿದೆ. ಇಂದು ಬರೋಬ್ಬರಿ 2900 ರೂ. ಗಳಷ್ಟು ಏರಿಕೆಯಾಗಿದ್ದು 1,16,000 ರೂ. ಗಳಷ್ಟಾಗಿದೆ.