ಬೆಂಗಳೂರು: ಕಳೆದ ಕೆಲವು ದಿನಗಳಿಂದ ಪರಿಶುದ್ಧ ಚಿನ್ನದ ದರ ಇಳಿಕೆಯತ್ತ ಸಾಗಿತ್ತು. ಆದರೆ ಇಂದು ಮತ್ತೆ ಎಲ್ಲಾ ರೀತಿಯ ಚಿನ್ನದ ದರದಲ್ಲಿ ಭಾರೀ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ಇಳಿಕೆಯಾಗುತ್ತಿದೆ ಎನ್ನುವಷ್ಟರಲ್ಲೇ ಮತ್ತೆ ಲಕ್ಷದ ಗಡಿ ಸಮೀಪ ಬಂದು ನಿಂತಿದೆ. ವಾರಂತ್ಯದಲ್ಲಿ ಚಿನ್ನದ ದರ ಭರ್ಜರಿ ಇಳಿಕೆಯಾಗಿತ್ತು. ಇದು ಗ್ರಾಹಕರಿಗೆ ನೆಮ್ಮದಿ ನೀಡಿತ್ತು. ಆದರೆ ಈಗ ಮತ್ತೆ ಅದೇ ಕತೆ ಎನ್ನುವಂತಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ದರ ಮೊನ್ನೆ 98, 670.00 ರೂ.ಗಳಷ್ಟಿತ್ತು. ಇಂದು ಪರಿಶುದ್ಧದ ಚಿನ್ನದ ದರ ಭಾರೀ ಏರಿಕೆಯಾಗಿದ್ದು 99, 160.00 ರೂ. ಗಳಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 114 ರೂ.ಗಳಷ್ಟು ಏರಿಕೆಯಾಗಿದ್ದು 09,840 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 105 ರೂ.ಗಳಷ್ಟು ಏರಿಕೆಯಾಗಿದ್ದು 9,020 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 86 ರೂ.ಗಳಷ್ಟು ಏರಿಕೆಯಾಗಿದ್ದು 7,380 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರದಲ್ಲೂ ಕಳೆದ ಕೆಲವು ದಿನಗಳಿಂದ ದಾಖಲೆಯ ಬೆಲೆ ಇಳಿಕೆಯತ್ತ ಸಾಗಿತ್ತು. ಆದರೆ ಇಂದು ಬೆಳ್ಳಿ ದರವೂ ಏರಿಕೆಯಾಗಿದೆ. ಇಂದು ಬೆಳ್ಳಿ ದರವೂ 3,000 ರೂ.ಗಳಷ್ಟು ಏರಿಕೆಯಾಗಿದೆ. ಇಂದು ಬೆಳ್ಳಿ ದರ ಪ್ರತೀ ಕೆ.ಜಿ.ಗೆ 1,10, 000 ರೂ. ಗಳಾಗಿದೆ.