Webdunia - Bharat's app for daily news and videos

Install App

Gold Price today: ಚಿನ್ನ ಖರೀದಿದಾರರಿಗೆ ಇಂದು ಗುಡ್ ನ್ಯೂಸ್

Krishnaveni K
ಗುರುವಾರ, 15 ಮೇ 2025 (10:13 IST)
ಬೆಂಗಳೂರು: ಚಿನ್ನದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದನ್ನು ನೋಡಿ ಗ್ರಾಹಕರು ಕಂಗಾಲಾಗಿದ್ದರು. ಕಳೆದ ವಾರವಂತೂ ವಿಪರೀತ ಎನ್ನುವಷ್ಟು ಏರಿಕೆಯಾಗಿತ್ತು. ಇಂದು ಚಿನ್ನ ಖರೀದಿದಾರರಿಗೆ ಸ್ವಲ್ಪ ಸಮಾಧಾನಕರ ಸುದ್ದಿ.  ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರ ಚಿನ್ನದ ಬೆಲೆ ಸತತವಾಗಿ ಏರಿಕೆಯಾಗುತ್ತಲೇ ಇತ್ತು. ಒಮ್ಮೆಯಂತೂ 99.9 ಪರಿಶದ್ಧತೆಯ ಚಿನ್ನದ ಬೆಲೆ 1,00,730 ರೂ.ಗಳಾಗಿತ್ತು. ಆದರೆ ಇದೀಗ ಪರಿಶುದ್ಧ ಚಿನ್ನದ ಬೆಲೆ ಭಾರೀ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ  96,880.00 ರೂ.ಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 195 ರೂ. ನಷ್ಟು ಇಳಿಕೆಯಾಗಿದ್ದು 8,610 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 213 ರೂ. ನಷ್ಟು ಇಳಿಕೆಯಾಗಿದ್ದು 9,393 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 159 ರೂ. ನಷ್ಟು ಇಳಿಕೆಯಾಗಿದ್ದು 7,045 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ದರ ಮೊನ್ನೆಯಿಂದ ಇಳಿಕೆಯತ್ತ ಸಾಗಿತ್ತು.  ಆದರೆ ಮೊನ್ನೆ ಬೆಳ್ಳಿ ದರ ಭಾರೀ ಏರಿಕೆಯಾಗಿತ್ತು. ಇಂದು ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಇಂದೂ ಪ್ರತೀ ಕೆ.ಜಿ. 1000 ರೂ.ನಷ್ಟು ಇಳಿಕೆಯಾಗಿದ್ದು 1,08,000 ರೂ.ಗಳಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಹ್ಮದಾಬಾದ್ ವಿಮಾನ ಪತನ: ಸಂತ್ರಸ್ತರಿಗೆ ಹಣ ನೀಡಲು ಏರ್ ಇಂಡಿಯಾ ಕಳ್ಳಾಟವಾಡುತ್ತಿದೆಯೇ

ಕೊವಿಡ್ ಲಸಿಕೆಯಿಂದ ಹೃದಯಾಘಾತವಾಗ್ತಿರೋದು ನಿಜಾನಾ: ತಜ್ಞರ ಸಮಿತಿ ವರದಿ ಲೀಕ್

ಹೃದಯದ ಸಮಸ್ಯೆಗೂ ಗ್ಯಾಸ್ಟ್ರಿಕ್ ನೋವಿಗೂ ಇರುವ ವ್ಯತ್ಯಾಸವೇನು ತಿಳಿಯಿರಿ

Karnataka Weather: ಕರಾವಳಿ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಇನ್ನೆಷ್ಟು ದಿನ ಮಳೆಯಿರಲಿದೆ

ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ಜಯದೇವ್‌ಗೆ ರೋಗಿಗಳ ಸಂಖ್ಯೆ ಹೆಚ್ಚಳ: ಹೆಚ್ಚುವರಿ ತಜ್ಞ ವೈದ್ಯರ ನಿಯೋಜನೆ

ಮುಂದಿನ ಸುದ್ದಿ
Show comments