ಅದಾನಿ ಗ್ರೂಪ್‌ನ ಮಾಲೀಕತ್ವದಲ್ಲಿರುವ ಅದಾನಿ ಗ್ರೀನ್ ಎನರ್ಜಿ 1.8 ಶತಕೋಟಿ ಡಾಲರ್ ಸಾಲ ಪಡೆಯಲು ವಿದೇಶದಲ್ಲಿರುವ ಸಾಲದಾತರ ಗುಂಪಿನೊಂದಿಗೆ ಮಾತುಕತೆ ನಡೆಸುತ್ತಿದೆ.
ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ಅದಾನಿ ಗ್ರೀನ್ ಎನರ್ಜಿ ಕಾರ್ಯಾಚರಣೆ ಮಾಡುತ್ತಿದೆ. ಸಾಲದ ಮೊತ್ತವನ್ನು ಕಂಪನಿ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸಲಾಗುತ್ತದೆ ಎಂದು ಹೆಸರು ತಿಳಿಸಲು ಇಚ್ಛಿಸದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.