Select Your Language

Notifications

webdunia
webdunia
webdunia
webdunia

ನೀವು ಶ್ರೀಮಂತರಾ, ಬಡವರಾ ಎಂಬುದನ್ನು ಇನ್ನು ಮುಂದೆ ಫೇಸ್‌ಬುಕ್ ಹೇಳಲಿದೆ

ನೀವು ಶ್ರೀಮಂತರಾ, ಬಡವರಾ ಎಂಬುದನ್ನು ಇನ್ನು ಮುಂದೆ ಫೇಸ್‌ಬುಕ್ ಹೇಳಲಿದೆ

ರಾಮಕೃಷ್ಣ ಪುರಾಣಿಕ

ಬೆಂಗಳೂರು , ಸೋಮವಾರ, 5 ಫೆಬ್ರವರಿ 2018 (17:51 IST)
ಬಳಕೆದಾರರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಮತ್ತು ಅವರನ್ನು ಕಾರ್ಮಿಕ ವರ್ಗ, ಮಧ್ಯಮ ವರ್ಗ ಅಥವಾ ಮೇಲ್ವರ್ಗ ಎಂಬ ಮೂರು ವರ್ಗಗಳಲ್ಲಿ ಪ್ರತ್ಯೇಕಿಸುವ ತಂತ್ರಜ್ಞಾನಕ್ಕಾಗಿ ಫೇಸ್‌ಬುಕ್ ಪೇಟೆಂಟ್‍ಗೆ ಅರ್ಜಿ ಸಲ್ಲಿಸಿದೆ.
ಪೇಟೆಂಟ್‌ನ ಪ್ರಕಾರ, ದೈತ್ಯ ಸಾಮಾಜಿಕ ಮಾಧ್ಯಮವು ಬಳಕೆದಾರರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಊಹಿಸುವ ಸಲುವಾಗಿ ವಿದ್ಯಾರ್ಹತೆ, ಮನೆ ಮಾಲೀಕತ್ವ ಮತ್ತು ಇಂಟರ್ನೆಟ್ ಬಳಕೆಯಂತಹ ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ನಿರ್ಮಿಸಲು ಬಯಸಿದೆ ಎಂದು ಡೈಲಿಮೇಲ್ ಶನಿವಾರದಂದು ವರದಿ ಮಾಡಿದೆ.
 
ಪೇಟೆಂಟ್ ಅನ್ನು ಶುಕ್ರವಾರ ಸಾರ್ವಜನಿಕವಾಗಿ ಪ್ರಕಟಿಸಲಾಯಿತು, ಫೇಸ್‌ಬುಕ್‌ನ ಗುರಿ ಸಾಮರ್ಥ್ಯಗಳನ್ನು ಸುಧಾರಿಸಲು ಕ್ರಮಾವಳಿಯನ್ನು ಸೂಚಿಸಲಾಗಿದೆ, ಇದು ಬಳಕೆದಾರರಿಗೆ ಹೆಚ್ಚು ಸೂಕ್ತವಾದ ಜಾಹೀರಾತುಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
 
ಪೇಟೆಂಟ್‌ನ ಪ್ರಕಾರ "ಬಳಕೆದಾರರ ಸಾಮಾಜಿಕ-ಆರ್ಥಿಕ ಗುಂಪುಗಳನ್ನು ಊಹಿಸುವುದರಿಂದ, ಸೂಕ್ತ ಬಳಕೆದಾರರಿಗೆ ಮೂರನೇ ವ್ಯಕ್ತಿಯ ಪ್ರಾಯೋಜಿತ ವಿಷಯವನ್ನು ಪ್ರಸ್ತುತಪಡಿಸವುದಕ್ಕೆ ಸಹಾಯ ಮಾಡಲು ಫೇಸ್‌ಬುಕ್‌ಗೆ ಸಾಧ್ಯವಾಗುತ್ತದೆ". ಇದರೊಂದಿಗೆ "ಮೂರನೇ ವ್ಯಕ್ತಿಗಳು ತಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಸಾಧ್ಯವಾಗುತ್ತದೆ ಮತ್ತು ಆನ್‌ಲೈನ್ ವ್ಯವಸ್ಥೆಯು ಬಳಕೆದಾರರಿಗೆ ಹೆಚ್ಚು ತೊಡಗಿಸಿಕೊಳ್ಳಬಹುದಾದ ಬಳಕೆದಾರರ ಅನುಭವವನ್ನು ಒದಗಿಸಬಹುದು".
 
ಫೇಸ್‌ಬುಕ್ ಬಳಕೆದಾರರಿಗೆ ಅವರ ವಯಸ್ಸು ಮತ್ತು ಆ ವಯಸ್ಸಿನ ಬಳಕೆದಾರರಿಗೆ ಸಂಬಂಧಿಸಿರಬಹುದಾದ ಪ್ರಶ್ನೆಗಳನ್ನು ಕೇಳಬಹುದು. "ಭರ್ತಿ ಮಾಡುವಾಗ, 20 ರಿಂದ 30 ವರ್ಷದವರಿಗೆ ಅವರು ಎಷ್ಟು ಇಂಟರ್ನೆಟ್ ಸಾಧನಗಳನ್ನು ಹೊಂದಿದ್ದಾರೆ ಎಂದು ಕೇಳಲಾಗುತ್ತದೆ, 30 ರಿಂದ 40 ವರ್ಷದವರಿಗೆ ಅವರು ಮನೆಯ ಮಾಲೀಕರಾಗಿದ್ದಾರೆಯೇ ಎಂದು ಕೇಳಲಾಗುತ್ತದೆ" ಎಂದು ವರದಿ ಹೇಳಿದೆ.
 
ಅದಾಗ್ಯೂ, ಪೇಟೆಂಟ್ ಅನ್ನು ವಾಸ್ತವವಾಗಿ ಬಳಕೆದಾರ ಉದ್ದೇಶಕ್ಕಾಗಿ ಬಳಸಲಾಗುತ್ತದೆಯೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಈ ಸಾಮಾಜಿಕ ಮಾಧ್ಯಮವು ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ತಿಳಿದುಕೊಳ್ಳಲು ವ್ಯಕ್ತಿಯ ಪ್ರವಾಸದ ಇತಿಹಾಸ, ಬಳಕೆದಾರರು ಹೊಂದಿರುವ ಸಾಧನಗಳ ಪ್ರಕಾರ, ಇಂಟರ್ನೆಟ್ ಸಂಪರ್ಕ ಹೊಂದಿರುವ ಸಾಧನಗಳು ಎಷ್ಟು ಮತ್ತು ಅವರ ಗರಿಷ್ಠ ವಿದ್ಯಾರ್ಹತೆ ಎಷ್ಟು ಎಂಬಂತಹ ಇತರ ಮಾಹಿತಿಯನ್ನು ಪರಿಗಣಿಸಬಹುದು.
 
ಆಶ್ಚರ್ಯಕರ ಸಂಗತಿ ಎಂದರೆ, ಬಳಕೆದಾರರು ವರ್ಷಕ್ಕೆ ಎಷ್ಟು ಸಂಪಾದಿಸುತ್ತಿದ್ದಾರೆ ಎಂಬುದರ ಬಗ್ಗೆ ಹೇಳಲು ಹಿಂಜರಿಯುವುದರಿಂದ ಫೇಸ್‌ಬುಕ್ ಆದಾಯದ ಕುರಿತು ಯಾವುದೇ ಮಾಹಿತಿಯನ್ನು ಕೇಳುತ್ತಿಲ್ಲ ಎಂದು ವರದಿಗಳು ಹೇಳುತ್ತವೆ.
 
"ಆನ್‌ಲೈನ್ ವ್ಯವಸ್ಥೆಗಳು ಸಾಮಾನ್ಯವಾಗಿ ಬಳಕೆದಾರರ ಆದಾಯದ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿರುವುದಿಲ್ಲ, ಉದಾಹರಣೆಗೆ, ಬಳಕೆದಾರರು ಸಾಮಾನ್ಯವಾಗಿ ಆದಾಯ ಮಾಹಿತಿಯನ್ನು ಹಂಚಿಕೊಳ್ಳಲು ಇಚ್ಛಿಸುವುದಿಲ್ಲ, ಕಾರಣ ಆನ್‌ಲೈನ್ ವ್ಯವಸ್ಥೆಗಳಲ್ಲಿ ಇದು ಸೂಕ್ಷ್ಮ ಮಾಹಿತಿಯಾಗಿದೆ" ಎಂದು ಪೇಟೆಂಟ್‌ನಲ್ಲಿರುವುದನ್ನು ಡೈಲಿ ವರದಿ ಮಾಡಿದೆ.
 
"ಫೇಸ್‌ಬುಕ್‌ನಲ್ಲಿ ಬಳಕೆದಾರರು ಮಾಡುವ ಕಾರ್ಯಗಳನ್ನು" ಸಹ ಫೇಸ್‌ಬುಕ್ ಪರಿಗಣಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಕಾಕಾರರಿಗೆ ರಮ್ಯಾ ತಿರುಗೇಟು