Select Your Language

Notifications

webdunia
webdunia
webdunia
webdunia

ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆಗೆ ಖರ್ಚು ಬಲು ದುಬಾರಿ

Radhika Merchant

Krishnaveni K

ಮುಂಬೈ , ಶುಕ್ರವಾರ, 1 ಮಾರ್ಚ್ 2024 (09:34 IST)
ಮುಂಬೈ: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಗುಜರಾತ್ ನ ಜಾಮ್ ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.
 
ಈ ಕಾರ್ಯಕ್ರಮಕ್ಕೆ ಈಗಾಗಲೇ ಬಾಲಿವುಡ್, ರಾಜಕೀಯ, ಕ್ರಿಕೆಟ್, ಉದ್ಯಮ ವಲಯ ಸೇರದಿಂತೆ ಗಣ್ಯಾತಿ ಗಣ್ಯರು ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬರಲು ಅತಿಥಿಗಳಿಗೆ ಐಷಾರಾಮಿ ಕಾರು, ವಸತಿ ವ್ಯವಸ್ಥೆ ಎಲ್ಲವನ್ನೂ ಅಂಬಾನಿ ಕುಟುಂಬ ಮಾಡಿದೆ.

ಈಗಾಗಲೇ ಬಾಲಿವುಡ್ ನಟ ಸಲ್ಮಾನ್ ಖಾನ್, ಶಾರುಖ್ ಖಾನ್ ಕುಟುಂಬ ಸೇರಿದಂತೆ ಸೆಲೆಬ್ರಿಟಿಗಳ ದಂಡೇ ಜಾಮ್ ನಗರಕ್ಕೆ ಬಂದಿದೆ. ಇವರೆಲ್ಲರಿಗೂ ಕೋಟಿ ಬೆಲೆಯ ರೋಲ್ಸ್ ರೋಯ್, ಬಿಎಂಡಬ್ಲ್ಲು ಕಾರಿನ ವ್ಯವಸ್ಥೆ ಮಾಡಲಾಗಿದೆ. ಮದುವೆಗೆ ಮೊದಲು ಅಂಬಾನಿ ಕುಟುಂಬ ಸಾಂಪ್ರದಾಯಿಕವಾಗಿ ತಮ್ಮ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ಮಾಡಿದೆ. ಈ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಗೆ ಭೋಜನ ನೀಡಲಾಗಿದೆ.

ಹೇಳಿ ಕೇಳಿ, ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಹೀಗಾಗಿ ಅವರ ಸಂಪತ್ತಿಗೆ ತಕ್ಕಂತೇ ಮದುವೆ ಮಾಡುತ್ತಿದ್ದಾರೆ. ಮುಕೇಶ್ ಅಂಬಾನಿ ಮಕ್ಕಳ ಪೈಕಿ ಇದು ಕೊನೆಯ ಮದುವೆ. ಹೀಗಾಗಿ ಅಂಬಾನಿ ಕುಟುಂಬ ತಮ್ಮ ಕಿರಿಯ ಮಗನ ಮದುವೆಗೆ 1000 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ವರದಿಯಾಗಿದೆ. ಮದುವೆಗೆ ರಾಧಿಕಾ ತೊಡುವ ಬಟ್ಟೆಯ ಬೆಲೆಯೇ ಕೋಟ್ಯಾಂತರ ರೂಪಾಯಿಗಳಿವೆ. ಜೊತೆಗೆ ಮದುವೆ ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿಗಳಿಗೆ ಮನರಂಜನೆ ನೀಡಲು ಹಾಲಿವುಡ್, ಪಾಪ್ ಗಾಯಕರನ್ನು ಕರೆಸಲಾಗುತ್ತಿದ್ದು, ಅವರಿಗೆ ಕೋಟಿಗಟ್ಟಲೆ ಸಂಭಾವನೆ ನೀಡಲಾಗುತ್ತಿದೆ. ಜೊತೆಗೆ ಮದುವೆ ಬರುವ ಅತಿಥಿಗಳಿಗೆ ನೀಡಲೆಂದೇ ಅಂಬಾನಿ ಕುಟುಂಬ ವಿಶೇಷ ಉಡುಗೊರೆಗಳನ್ನೂ ನಿರ್ಮಿಸಲು ಗುತ್ತಿಗೆ ನೀಡಿದೆ. ಹೀಗೆ ಅಂಬಾನಿ ಮನೆ ಮದುವೆ ಎಂದರೆ ಇಡೀ ವಿಶ್ವವೇ ತಿರುಗಿ ನೋಡುವಂತೆ ಮದುವೆ ಮಾಡಲಿದ್ದಾರೆ ಮುಕೇಶ್ ಅಂಬಾನಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮೆ ಪಡೆಯಲು ಕಾಲು ಕತ್ತರಿಸಿಕೊಂಡ ಭೂಪ