Select Your Language

Notifications

webdunia
webdunia
webdunia
webdunia

ಫೇಸ್‌ಬುಕ್‌ ಲಾಗೌಟ್ ಮಾಡಲು ಮರೆತಿದ್ದೀರಾ? ಇಲ್ಲಿದೆ ನೋಡಿ ಪರಿಹಾರ

ಫೇಸ್‌ಬುಕ್‌ ಲಾಗೌಟ್ ಮಾಡಲು ಮರೆತಿದ್ದೀರಾ? ಇಲ್ಲಿದೆ ನೋಡಿ ಪರಿಹಾರ
ನವದೆಹಲಿ , ಶುಕ್ರವಾರ, 29 ಏಪ್ರಿಲ್ 2016 (13:47 IST)
ದೈತ್ಯ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್ ಬಳಕೆದಾರರ ದೈನಂದಿನ ಜೀವನದ ಒಂದು ಭಾಗವಾಗಿದೆ. ಬಳಕೆದಾರರು ಕಛೇರಿ, ಸೈಬರ್ ಕೆಫೆ ಅಥವಾ ಗೆಳೆಯರ ಮೊಬೈಲ್‌ನಲ್ಲಿ ತಮ್ಮ ಖಾತೆಯನ್ನು ತೆರೆದು ಲಾಗೌಟ್ ಮಾಡುವುದನ್ನು ಮರೆತು ಪೇಚಾಡುವ ಸನ್ನಿವೇಶಗಳು ಸಾಮಾನ್ಯವಾಗಿ ಎದುರಾಗಿರುತ್ತವೆ. ಈ ರೀತಿಯ ತೊಂದರೆ ಎದುರಾಗಿದ್ದರೆ ಇನ್ನೂ ಮುಂದೆ ಚಿಂತೆ ಪಡಬೇಡಿ.
ಫೇಸ್‌ಬುಕ್ ಖಾತೆ ಲಾಗೌಟ್ ಮಾಡುವುದನ್ನು ಮರೆತು ಪೇಚಾಡುತಿದ್ದರೆ, ಈ 10 ಕ್ರಮಗಳನ್ನು ಅನುಸರಿಸಿ.
 
1. ಮೊದಲು ಮೇನ್ ಮೆನುವಿಗೆ ತೆರಳಿ
 
2. ಮೇನ್ ಮೆನುವಿನಲ್ಲಿ ಸೆಟ್ಟಿಂಗ್ ಆಯ್ಕೆಯನ್ನು ಆಯ್ದುಕೊಳ್ಳಿ.
 
3. ನಿಮ್ಮ ಸ್ಕ್ರೀನ್ ಎಡ ಬದಿಯಲ್ಲಿರುವ ಸೆಕ್ಯೂರಿಟಿ ಆಯ್ಕೆಯನ್ನು ಆಯ್ದುಕೊಳ್ಳಿ
 
4. ಸೆಕ್ಯೂರಿಟಿ ಆಯ್ಕೆ ಆಯ್ದುಕೊಂಡ ನಂತರ, ಸ್ಕ್ರೀನ್ ಬಲ ಬದಿಯಲ್ಲಿ ಹಲವಾರು ಆಯ್ಕೆಗಳು ತೆರೆದುಕೊಳ್ಳುತ್ತವೆ. ಅಲ್ಲಿ ವೇರ್ ಯುಆರ್ ಲಾಗಡ್ ಇನ್ ಆಯ್ಕೆಯನ್ನು ಆಯ್ದುಕೊಳ್ಳಿ.
 
5. ಯುಆರ್ ಲಾಗಡ್ ಇನ್ ಆಯ್ಕೆಯ ಹತ್ತಿರದಲ್ಲಿ ಎಡಿಟ್ ಆಯ್ಕೆ ಇರುತ್ತದೆ.
 
6. ಎಡಿಟ್ ಆಯ್ಕೆಯನ್ನು ಆಯ್ದುಕೊಳ್ಳಿ
 
7. ಇಲ್ಲಿ ಪ್ರಸ್ತುತ ಅವಧಿಯ ಎಲ್ಲಾ ಲಾಗ್ ಇನ್ ಚಟುವಟಿಕೆಗಳು ತೆರೆದುಕೊಳ್ಳುತ್ತದೆ. ಬಳಕೆದಾರರ ಹಿಂದಿನ ಸ್ಥಾನ ಮತ್ತು ಬಳಸಿರುವ ಡಿವೈಸ್ ವಿಧವನ್ನು ಸಹ ತೊರಿಸುತ್ತದೆ. 
 
8. ಪ್ರತಿಯೊಂದು ಆಯ್ಕೆಯ ಪಕ್ಕದಲ್ಲಿ ಎಂಡ್ ಆಕ್ಟಿವಿಟಿ ಬಟನ್‌ ಇರುತ್ತದೆ.
 
9. ನೀವು ಯಾವ ಡಿವೈಸ್‌ನಿಂದ ಲಾಗೌಟ್ ಮಾಡಬವಸುತ್ತಿರಿ ಆ ಆಯ್ಕೆಯ ಮುಂದಿನ ಎಂಡ್ ಆಕ್ಟಿವಿಟಿ ಬಟನ್‌ ಕ್ಲಿಕ್ ಮಾಡಿ.
 
10. ಇಗ ನೀವು, ಹಿಂದೆ ಮಾಡಿರುವ ಎಲ್ಲಾ ಅನಗತ್ಯ ಲಾಗ್‌ಇನ್‌ನಿಂದ ಲಾಗೌಟ್ ಆಗುತ್ತಿರಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬರ ನಿರ್ವಹಣೆ ಕಾಮಗಾರಿಯಲ್ಲಿ ರಾಜಕೀಯ ಬೇಡ: ಕೆ.ಎಸ್.ಈಶ್ವರಪ್ಪ