Select Your Language

Notifications

webdunia
webdunia
webdunia
webdunia

ಎಟಿಎಂನಲ್ಲಿ ಕ್ಯೂ ನಿಂತು ಬೇಸತ್ತ ಯುವತಿ ಆಕ್ರೋಶದಿಂದ ಟಾಪ್‌ಲೆಸ್ ಪ್ರತಿಭಟನೆ

ಎಟಿಎಂನಲ್ಲಿ ಕ್ಯೂ ನಿಂತು ಬೇಸತ್ತ ಯುವತಿ ಆಕ್ರೋಶದಿಂದ ಟಾಪ್‌ಲೆಸ್ ಪ್ರತಿಭಟನೆ
ನವದೆಹಲಿ , ಗುರುವಾರ, 17 ನವೆಂಬರ್ 2016 (15:55 IST)
ಹಣವನ್ನು ಪಡೆಯಲು ಎಟಿಎಂನಲ್ಲಿ ಸರದಿಗಾಗಿ ನಿಂತಿದ್ದ ಯುವತಿಯೊಬ್ಬಳು ಗಂಟೆಗಳು ಕಳೆದರು ಹಣ ದೊರೆಯದಿದ್ದಾಗ ಆಕ್ರೋಶಗೊಂಡು ಪ್ರತಿಭಟನೆ ತೋರಲು ತನ್ನ ಟಿ-ಶರ್ಟ್ ಬಿಚ್ಚೆಸೆದು ಟಾಪ್‌ಲೆಸ್ ಆದ ಘಟನೆ ವರದಿಯಾಗಿದೆ.  
ಪ್ರಧಾನಮಂತ್ರಿ ನರೇಂದ್ರ ಮೋದಿಯ 500 ರೂ ಮತ್ತು 1000 ರೂಪಾಯಿ ನೋಟುಗಳಿಗಾಗಿ ಹೇರಿದ ನಿಷೇಧ ಹಲವರ ಜೀವನದಲ್ಲಿ ರಾತೋರಾತ್ರಿ ಬದಲಾವಣೆ ತಂದಿದೆ. ಹಳೆಯ ನೋಟುಗಳನ್ನು ನಿಷೇಧಿಸಿದ್ದರಿಂದ ಜನರು ಹೊಸ ನೋಟಿಗಾಗಿ ಎಟಿಎಂ ಮುಂದೆ ನಿಲ್ಲುವುದು ಅನಿವಾರ್ಯವಾಗಿದೆ.
 
ಕೇಂದ್ರ ಸರಕಾರದ ವಿವೇಚನೆಯಿಲ್ಲದ ನಿರ್ಧಾರದಿಂದಾಗಿ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಕಪ್ಪು ಹಣ ಹೊಂದಿದವರು ತಮ್ಮ ಹಣವನ್ನು ವೈಟ್ ಹೇಗೆ ಮಾಡಬೇಕು ಎನ್ನುವ ಚಿಂತೆಯಲ್ಲಿದ್ದರೆ, ಕೆಲವರು ಪರಿಶ್ರಮ, ಪ್ರಾಮಾಣಿಕತೆಯಿಂದ ದುಡಿದ ಹಣವನ್ನು ಪಡೆಯುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ. 
 
ನವದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ಎಟಿಎಂ ಕ್ಯೂ ನಲ್ಲಿ ನಿಂತಿದ್ದ ಯುವತಿಯೊಬ್ಬಳು ಹಲವು ಗಂಟೆಗಳು ಕಾದರೂ ಹಣ ದೊರೆಯದಿದ್ದಾಗ ಸರದಿಯಲ್ಲಿ ನಿಂತಿರುವ ನೂರಾರು ಜನರ ಮಧ್ಯೆಯೇ ತನ್ನ ಟಿ-ಶರ್ಟ ಬಿಚ್ಚೆಸೆದು ಟಾಪ್‌ಲೆಸ್ ಆಗಿದ್ದಾಳೆ.
 
ಎಟಿಎಂ ಸರದಿಯಲ್ಲಿ ನಿಂತಿರುವ ಗ್ರಾಹಕರನ್ನು ನಿಯಂತ್ರಿಸಲು ನಿಂತಿದ್ದ ಮಹಿಳಾ ಪೇದೆಯೊಬ್ಬಳು ಕೂಡಲೇ ಯುವತಿಯನ್ನು ಟೀ-ಶರ್ಟ್ ಧರಿಸುವಂತೆ ಒತ್ತಾಯಿಸಿ ನಂತರ ಗಾಜಿಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾಳೆ. ನಂತರ ಯುವತಿಯನ್ನು ಎಕ್ಸಿಸ್ ಬ್ಯಾಂಕ್‌ಗೆ ಕರೆದುಕೊಂಡು ಆಕೆಗೆ ಅಗತ್ಯವಾಗಿರುವ ಹಣ ಪಡೆಯಲು ಪೊಲೀಸರು ಸಹಕರಿಸಿದ್ದಾರೆ.
 
ವರದಿಗಳ ಪ್ರಕಾರ, ಹಲವು ಗಂಟೆಗಳಿಂದ ಎಟಿಎಂನಲ್ಲಿ ಹಣ ಪಡೆಯಲು ಸರದಿಗಾಗಿ ಗ್ರಾಹಕರು ಕಾಯುತ್ತಾ ನಿಂತಿದ್ದರು ಎನ್ನಲಾಗಿದೆ. ಆದರೆ,ಯುವತಿ ಬೇಸತ್ತು ತನ್ನ ಟಿ-ಶರ್ಟ್ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಪ್ರಧಾನಿ ಮೋದಿಯ ನಿರ್ಧಾರವನ್ನು ಲಕ್ಷಾಂತರ ಜನರು ಸ್ವಾಗತಿಸಿದರೂ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಾಸ್ತವತೆ ಭಿನ್ನವಾಗಿದೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಅದಾನಿ, ಅಂಬಾನಿಗೆ ನೋಟು ನಿಷೇಧದ ಬಗ್ಗೆ ಮೊದಲೇ ಗೊತ್ತಿತ್ತು: ಬಿಜೆಪಿ ಶಾಸಕ