ಗ್ರಾಹಕರಿಗೆ ವೋಡಾಫೋನ್ ಕಡೆಯಿಂದ ಬಂಪರ್ ಆಫರ್!

ಬುಧವಾರ, 7 ಆಗಸ್ಟ್ 2019 (08:57 IST)
ನವದೆಹಲಿ : ವೋಡಾಫೋನ್ ಗ್ರಾಹಕರನ್ನು ಸೆಳೆಯಲು ತನ್ನ 225 ರೂ.ಗಳ ಪ್ರಿಪೇಯ್ಡ್​ ರಿಚಾರ್ಜ್​ ಪ್ಲಾನ್​ ನ್ನು ಪರಿಷ್ಕರಿಸಿ ಗ್ರಾಹಕರಿಗೆ ಹೆಚ್ಚುವರಿ ಡೇಟಾವನ್ನು ನೀಡಲು ಮುಂದಾಗಿದೆ.ಇದಕ್ಕೂ ಮೊದಲು ವೋಡಾಫೋನ್  ತನ್ನ 225 ರೂ.ಗಳ ಪ್ರಿಪೇಯ್ಡ್​ ರಿಚಾರ್ಜ್​ ಪ್ಲಾನ್​ ನಲ್ಲಿ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಎಸ್‌ ಟಿಡಿ ಮತ್ತು ಲೋಕಲ್ ಕರೆಗಳನ್ನು ಉಚಿತವಾಗಿ ನೀಡುತ್ತಿತ್ತು. ಜೊತೆಗೆ ಪ್ರತಿದಿನ  2 GB ಡೇಟಾ ದೊರೆಯುತ್ತಿತ್ತು.

 

ಆದರೆ ಈಗ ಈ ಯೋಜನೆಯನ್ನು  ಪರಿಷ್ಕರಿಸಿದ ವೋಡಾಫೋನ್ , 500 mb ಡೇಟಾ ವನ್ನು ಹೆಚ್ಚುವರಿಯಾಗಿ  ನೀಡುತ್ತಿದೆ. ಗ್ರಾಹಕರು ಈ ಪ್ಲಾನ್​ ಅನ್ನು ಅಳವಡಿಸಿಕೊಂಡರೆ ಪ್ರತಿ ದಿನ 100 SMS​ಗಳನ್ನು ಉಚಿತವಾಗಿ ಸಿಗಲಿದೆ. ಜೊತೆಗೆ ವೊಡಾಫೋನ್​ ಪ್ಲೇ ಆಯಪ್​ ಮೂಲಕ ಮೂವಿ, ಲೈವ್​ ಟಿವಿ ವೀಕ್ಷಿಸುವ ಅವಕಾಶ ದೊರೆಯಲಿದೆ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕನ್ನಡಿಗರನ್ನು ಕನ್ನಡದಲ್ಲೇ ಮಾತನಾಡಿಸುತ್ತಿದ್ದ ಸುಷ್ಮಾ ಸ್ವರಾಜ್