Webdunia - Bharat's app for daily news and videos

Install App

ಅಭಿನಂದನ್ ಪ್ರೀಪೇಯ್ಡ್ ಪ್ಲ್ಯಾನ್ ನ್ನು ಪರಿಷ್ಕರಿಸಿದ ಬಿ.ಎಸ್.ಎನ್.ಎಲ್.

Webdunia
ಸೋಮವಾರ, 5 ಆಗಸ್ಟ್ 2019 (09:02 IST)
ನವದೆಹಲಿ : ಬಿ.ಎಸ್.ಎನ್.ಎಲ್. ಇತ್ತೀಚೆಗೆ ಪರಿಚಯಿಸಿದ ಅಭಿನಂದನ್ ಎಂಬ ಪ್ರೀಪೇಯ್ಡ್ ಪ್ಲ್ಯಾನ್ ನ್ನು ಇದೀಗ ಪರಿಷ್ಕರಿಸಿದ್ದು, ಇದರಲ್ಲಿ ಈಗ ಹೆಚ್ಚುವರಿ ಡೇಟಾ ಸಿಗಲಿದೆ.




ಬಿ.ಎಸ್.ಎನ್.ಎಲ್. ಇತ್ತೀಚೆಗೆ ಅಭಿನಂದನ್ ಪ್ರೀಪೇಯ್ಡ್ ಪ್ಲ್ಯಾನ್ ಯೋಜನೆಯನ್ನು ಪರಿಚಯಿಸಿದ್ದು, 151ರೂ.ಗಳ ಈ ಪ್ಲ್ಯಾನ್ ನಲ್ಲಿ ಅನಿಯಮಿತ ಕರೆಗಳು, ಪ್ರತಿದಿನ 1 ಜಿಬಿ ಡೇಟಾ (ಇಂಟರ್ನೆಟ್) ಹಾಗೂ 24 ದಿನಗಳಿಗೆ ದಿನಕ್ಕೆ 100 ಎಸ್ಸೆಮ್ಮೆಸ್ ಉಚಿತವಾಗಿ ದೊರೆಯುತ್ತಿದ್ದವು. ಇದು 24 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.


ಆದರೆ ಇದೀಗ ಈ ಯೋಜನೆಯನ್ನು ಪರಿಷ್ಕರಿಸಿದ ಬಿ.ಎಸ್.ಎನ್.ಎಲ್., ಹೆಚ್ಚುವರಿ ಇಂಟರ್ನೆಟ್ ಸೌಕರ್ಯ ನೀಡಲಿದೆ.  ಅಂದರೆ ದಿನಕ್ಕೆ 1.5 ಜಿಬಿ ಡೇಟಾ ದೊರೆಯಲಿದೆ. ದಿನಕ್ಕೆ 1.5 ಜಿಬಿ ಎಂದರೆ 24 ದಿನಗಳ ವ್ಯಾಲಿಡಿಟಿ ಅವಧಿಗೆ ಒಟ್ಟು 36 ಜಿಬಿ ದೊರೆತಂತಾಯಿತು. ದಿನದ 1.5 ಜಿಬಿ ಕೋಟಾ ಮುಗಿದರೆ, ಬಿಎಸ್ಸೆನ್ನೆಲ್ ಇಂಟರ್ನೆಟ್ ಸ್ಪೀಡ್ 40kbps ಗೆ ಇಳಿಯುತ್ತದೆ.


ಜೂ.13ರಿಂದ ಆರಂಭವಾದ ಈ ಯೋಜನೆಯು ಅಂದಿನಿಂದ 90 ದಿನಗಳ ಕಾಲ ಲಭ್ಯ ಇರುತ್ತದೆ. ಅಭಿನಂದನ್ ಪ್ಲ್ಯಾನ್‌ ನ ವ್ಯಾಲಿಡಿಟಿ 180 ದಿನಗಳ ಕಾಲ ಇರುತ್ತದೆಯಾದರೂ, ಯೋಜನೆಯ ಪ್ರಯೋಜನಗಳು ಸಿಗುವುದು 24 ದಿನಗಳ ಕಾಲ ಮಾತ್ರ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments