Select Your Language

Notifications

webdunia
webdunia
webdunia
webdunia

ಖಾತೆ ಹೊಂದಿರದಿದ್ದರೂ ಈ ಬ್ಯಾಂಕ್ ನಲ್ಲಿ ಸಿಗುತ್ತೆ ಎಟಿಎಂ ಕಾರ್ಡ್

ಖಾತೆ ಹೊಂದಿರದಿದ್ದರೂ ಈ ಬ್ಯಾಂಕ್ ನಲ್ಲಿ ಸಿಗುತ್ತೆ ಎಟಿಎಂ ಕಾರ್ಡ್
ಬೆಂಗಳೂರು , ಬುಧವಾರ, 10 ಏಪ್ರಿಲ್ 2019 (09:23 IST)
ಬೆಂಗಳೂರು : ಸಾಮಾನ್ಯವಾಗಿ ಬ್ಯಾಂಕ್ ಗಳು ಖಾತೆ ಹೊಂದಿದ ಗ್ರಾಹಕರಿಗೆ ಮಾತ್ರ ಎಟಿಎಂ ಕಾರ್ಡ್ ನೀಡುತ್ತದೆ. ಆದರೆ ಈ ಬ್ಯಾಂಕ್ ಖಾತೆ ಹೊಂದಿರದ ಗ್ರಾಹಕರಿಗೂ ಎಟಿಎಂ ಕಾರ್ಡ್ ನೀಡುತ್ತದೆಯಂತೆ.


ಹೌದು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬಿ.ಎನ್.ಬಿ. ಸುವಿದಾ ಕಾರ್ಡ್ ಎಂಬ  ಹೆಸರಿನ ಪ್ರಿಪೇಯ್ಡ್ ಎಟಿಎಂ ಕಾರ್ಡ್ ನೀಡುತ್ತಿದೆ. ಇದಕ್ಕೆ ಬ್ಯಾಂಕ್ ನಲ್ಲಿ ಖಾತೆ ಹೊಂದಿರಬೇಕಾಗಿಲ್ಲ. ಆದರೆ ಈ ಕಾರ್ಡ್ ದಾರರು ಮೊದಲು ರಿಚಾರ್ಜ್ ಮಾಡಿ ನಂತರ ಬಳಕೆ ಮಾಡಬೇಕು.


ಕಾರ್ಡ್ ದಾರರು ತಮಗೆ ಬೇಕಾದಷ್ಟು ಹಣವನ್ನು ಬ್ಯಾಂಕ್ ಖಾತೆಯಿಂದ ಕಾರ್ಡ್ ಗೆ ವರ್ಗಾವಣೆ ಮಾಡಿಕೊಳ್ಳಬೇಕು. ನಂತರ ಕಾರ್ಡ್ ಬಳಕೆ ಮಾಡಬಹುದು. ಈ ಪ್ರಿಪೇಯ್ಡ್ ಕಾರ್ಡ್ ಗೆ 500 ರೂಪಾಯಿಯಿಂದ 50,000 ರೂಪಾಯಿಯವರೆಗೆ ರಿಚಾರ್ಜ್ ಮಾಡಬಹುದು. ಈ ಕಾರ್ಡ್ ಮೂರು ವರ್ಷಗಳ ಕಾಲ ಮಾನ್ಯತೆ ಹೊಂದಿದ್ದು, ಮಾರುಕಟ್ಟೆಯಲ್ಲಿ, ಸ್ವೈಪ್ ಮಷಿನ್ ಗಳಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ನಲ್ಲಿ ಡೆನ್ಮಾರ್ಕ್ ಪುರುಷರ ವೀರ್ಯಕ್ಕೆ ಬಾರೀ ಬೇಡಿಕೆಯಂತೆ. ಇದಕ್ಕೆ ಕಾರಣವೇನು ಗೊತ್ತಾ?