Select Your Language

Notifications

webdunia
webdunia
webdunia
webdunia

ಏಸುಸ್ ಝೆನ್‍ಫೋನ್ 3 ಝೂಮ್ ಬೆಲೆ ಎಷ್ಟಿರಬಹುದು?

ಏಸುಸ್ ಝೆನ್‍ಫೋನ್ 3 ಝೂಮ್ ಬೆಲೆ ಎಷ್ಟಿರಬಹುದು?
New Delhi , ಬುಧವಾರ, 11 ಜನವರಿ 2017 (11:36 IST)
ತೈವಾನ್ ಮೂಲದ ಪ್ರಮುಖ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕಾ ಸಂಸ್ಥೆ ಏಸುಸ್ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಏಸುಸ್ ಝೆನ್‌ಫೋನ್ 3 ಝೂಮ್ ಹೆಸರಿನ ಈ ಫೋನನ್ನು ಇತ್ತೀಚೆಗೆ ಸಿಇಎಸ್-2017ರಲ್ಲಿ ಪ್ರಕಟಿಸಿತ್ತು. 
 
ಇದರ ಬೆಲೆ ಸುಮಾರು ರೂ.36,400 ಎಂದು ಕಂಪನಿ ತಿಳಿಸಿದೆ. ಇದರ ಸಂಪೂರ್ಣ ವಿಶೇಷತೆಗಳನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಕಂಪನಿ ತಿಳಿಸಿದೆ. ಪ್ರಾಥಮಿಕ ಸಮಾಚಾರದ ಪ್ರಕಾರ, ಈ ಫೋನ್‌ ವಿಶೇಷತೆಗಳು ಹೀಗಿವೆ...
 
* 5.5 ಇಂಚಿನ ಫುಲ್ ಎಚ್‌ಡಿ ಸ್ಪರ್ಶಸಂವೇದಿ ತೆರೆ, ಗೋರಿಲ್ಲಾ ಗ್ಲಾಸ್ 5 ಸಹಿತ
* 625 ಕ್ವಾಲ್ಕಮ್ ಸ್ನಾಪ್ ಡ್ರ್ಯಾಗನ್ ಪ್ರೋಸೆಸರ್
* 128 ಜಿಬಿ ಆಂತರಿಕ ಮೆಮೊರಿ
* 5000 ಎಂಎಎಚ್ ಬ್ಯಾಟರಿ
* ಹಿಂಬದಿಯಲ್ಲಿ 12 ಮೆಗಾ ಪಿಕ್ಸೆಲ್‌ನ ಎರಡು ಕ್ಯಾಮೆರಾಗಳು
* ಮುಂಬದಿ 13 ಮೆಗಾ ಪಿಕ್ಸೆಲ್ ಕ್ಯಾಮೆರಾ, ಫ್ಲ್ಯಾಶ್ ಸಹಿತ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಐಆರ್‌ಸಿಟಿಸಿ ಆಪ್ ಬಿಡುಗಡೆ