Arecanut Price today: ಅಡಿಕೆ ಬೆಲೆ ಇಂದು ಎಷ್ಟಾಗಿದೆ ಇಲ್ಲಿದೆ ವಿವರ

Krishnaveni K
ಮಂಗಳವಾರ, 22 ಏಪ್ರಿಲ್ 2025 (10:44 IST)
ಬೆಂಗಳೂರು: ಕಳೆದ ವಾರ ಕೊನೆಯಲ್ಲಿ ಏರಿಕೆಯಾಗಿದ್ದ ಅಡಿಕೆ ಬೆಲೆ ಈಗ ನಿಂತ ನೀರಾಗಿದೆ. ಮೊನ್ನೆಯಿಂದ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.

ಅಡಿಕೆ ಬೆಳೆ ಕಡಿಮೆಯಾಗಿದ್ದರೂ ಬೆಲೆ ಏರಿಕೆಯಾಗುತ್ತಿದೆ ಎಂಬ ನೆಮ್ಮದಿ ಬೆಳೆಗಾರರಲ್ಲಿತ್ತು. ಆದರೆ ಈಗ ಕಳೆದ ಎರಡು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಡಿಕೆ ಬೆಲೆ ಏರಿಕೆಯಾಗದೇ ಇದ್ದರೂ ಯಥಾಸ್ಥಿತಿಯಲ್ಲಿದ್ದೇ ಇದೆ. ಆದರೆ ಇಳಿಕೆಯಂತೂ ಆಗಿಲ್ಲ ಎನ್ನುವುದು ಸಮಾಧಾನಕರ ವಿಷಯ. ಹೊಸ ಅಡಿಕೆಗೆ ಇಂದೂ ಗರಿಷ್ಠ 440 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 500 ರೂ.ಗಳಷ್ಟಿದೆ. ಇಂದು ಡಬಲ್ ಚೋಲ್ ಬೆಲೆ ಗರಿಷ್ಠ 510 ರೂ.ಗಳಷ್ಟಿದೆ. ಅಡಿಕೆ ಬೆಲೆ ಮೊನ್ನೆಯಿಂದ ಇದೇ ರೀತಿ ಮುಂದುವರಿದಿದೆ.

ಹೊಸ ಫಟೋರ ದರ 345 ರೂ.ಗಳಷ್ಟೇ ಇದೆ. ಹಳೆ ಫಟೋರ ದರ 355 ರೂ. ಗಳಷ್ಟಿದೆ. ಹೊಸ ಉಳ್ಳಿ ದರ ಏರಿಕೆಯಾಗಿ ಗರಿಷ್ಠ 215 ರೂ., ಹಳೆ ಉಳ್ಳಿ ದರ 230 ಗಳಷ್ಟಾಗಿದೆ. ಹೊಸ ಕೋಕ ದರ 290 ರೂ., ಹಳೇ ಕೋಕ 300 ರೂ. ಗಳಷ್ಟೇ ಇದೆ.

ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ವಾರ ಸತತವಾಗಿ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು. ಆದರೆ ಮೊನ್ನೆ ಕಾಳುಮೆಣಸು ದರ ಏರಿಕೆಯಾಗಿತ್ತು.  ಆದರೆ ಕೆಲವು ದಿನಗಳಿಂದ ಕಾಳುಮೆಣಸು ದರದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ ಕಾಳುಮೆಣಸು ಗರಿಷ್ಠ ಬೆಲೆ 705 ರೂ.ಗಳಷ್ಟಿದೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಷ್ಟೇ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಪೋಟಕ್ಕೆ ಕನಿಷ್ಠ 9 ಮಂದಿ ಸಾವು: ನಗರದಾದ್ಯಂತ ಹೈ ಅಲರ್ಟ್

Delhi blast: ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಪೋಟ: ಜನರಲ್ಲಿ ಆತಂಕ video

ತಮಿಳುನಾಡಿನ 14 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ, ಕಾರಣ ಇಲ್ಲಿದೆ

ನಾಳೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ

ಮತಗಳ್ಳತನದ ವಿರುದ್ಧ ಸಹಿ ಸಂಗ್ರಹಿಸಿ ಎಐಸಿಸಿಗೆ ಒಪ್ಪಿಸಿದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments