Publish Date: Wed, 10 Dec 2025 (11:45 IST)
Updated Date: Wed, 10 Dec 2025 (11:47 IST)
ಬೆಂಗಳೂರು: ಅಡಿಕೆ ಬೆಲೆ ಕಳೆದ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಆದರೆ ಇಂದು ಕೆಲವು ವರ್ಗದ ಅಡಿಕೆ ಬೆಲೆ ಏರಿಕೆಯಾದರೆ ಮತ್ತೆ ಕೆಲವು ಇಳಿಕೆಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಅಡಿಕೆ ಬೆಲೆ ಏರಿಕೆಯೂ ಅಲ್ಲ ಇಳಿಕೆಯೂ ಇಲ್ಲ ಎನ್ನುವ ಸ್ಥಿತಿಯಲ್ಲಿತ್ತು. ಒಂದೆಡೆ ಬೆಳೆ ಕಡಿಮೆ, ಇನ್ನೊಂದೆಡೆ ಬೆಲೆ ಏರಿಕೆಯಾಗದೇ ಇರುವುದು ರೈತರ ಚಿಂತೆಗೆ ಕಾರಣವಾಗಿತ್ತು. ಆದರೆ ಇಂದು ಅಡಿಕೆ ಬೆಲೆ ದಿಡೀರ್ ಏರಿಕೆಯಾಗಿತ್ತು. ಆದರೆ ಇಂದು ಹೊಸ ಅಡಿಕೆ ಬೆಲೆ 5 ರೂ. ಏರಿಕೆಯಾಗಿ 415 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 5 ರೂ. ಇಳಿಕೆಯಾಗಿ 525 ರೂ. ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆ ಯಥಾಸ್ಥಿತಿಯಲ್ಲಿದ್ದು 540 ರೂ.ಗಳಷ್ಟಾಗಿದೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲೂ ಇಂದು ಕೊಂಚ ಏರಿಕೆಯಾಗಿದೆ. ಹೊಸ ಪಟೋರ ದರ 350 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 25 ರೂ ಇಳಿಕೆಯಾಗಿ 390 ರೂ.ಗಳಷ್ಟಿದೆ. ಹೊಸ ಉಳ್ಳಿ ದರ ಇಂದು 5 ರೂ. ಇಳಿಕೆಯಾಗಿ 225 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರ 15 ರೂ. ಇಳಿಕೆಯಾಗಿ 260 ರೂ.ಗಳಾಗಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು ಯಥಾಸ್ಥಿತಿಯಲ್ಲಿದ್ದು 665 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು 235 ರೂ.ಗಳಷ್ಟಾಗಿದೆ.