Publish Date: Wed, 08 Oct 2025 (11:23 IST)
Updated Date: Wed, 08 Oct 2025 (11:26 IST)
ಬೆಂಗಳೂರು: ದಸರಾ ಬಳಿಕ ಅಡಿಕೆ ಬೆಲೆ ಹೆಚ್ಚಾಗಬಹುದೇನೋ ಎಂಬ ನಿರೀಕ್ಷೆಗಳೂ ಸುಳ್ಳಾಗಿದೆ. ಅಡಿಕೆ ಬೆಲೆ ಈಗಲೂ ಸ್ಥಿರವಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ದಸರಾ ಮುಗಿದ ಬಳಿಕವೂ ಹೊಸ ಅಡಿಕೆ ವರ್ಗ ಪರಿಷ್ಕರಣೆಯಾದರೂ ಬೆಲೆ ಮಾತ್ರ ಸ್ಥಿರವಾಗಿದೆ. ಹೊಸ ಅಡಿಕೆ ಬೆಲೆ 350 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆಯೂ ಯಾವುದೇ ವ್ಯತ್ಯಾಸವಾಗಿಲ್ಲ.ಇಂದು 490 ರೂ. ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ 530 ರೂ.ಗಳಷ್ಟೇ ಇದೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲೂ ಯಾವುದೇ ಏರಿಕೆ ಅಥವಾ ಇಳಿಕೆಯಿಲ್ಲ. ಹೊಸ ಪಟೋರ ದರ 370 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 280 ರೂ.ಗಳಷ್ಟಿದೆ. ಹೊಸ ಉಳ್ಳಿ ದರದಲ್ಲಿ ವ್ಯತ್ಯಾಸವಾಗಿಲ್ಲ. ಇಂದು ಹೊಸ ಉಳ್ಳಿ ದರ 150 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರ 220 ರೂ.ಗಳಾಗಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಬೆಲೆ ಇಂದು ಮತ್ತೆ 15 ರೂ. ಏರಿಕೆಯಾಗಿದ್ದು 665 ರೂ.ಗಳಷ್ಟಾಗಿದೆ. ಒಣ ಕೊಬ್ಬರಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ, 250 ರೂ.ಗಳಷ್ಟಾಗಿದೆ.