Daily Horoscope

Select Your Language

Notifications

webdunia
webdunia
webdunia
webdunia

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Arecanut price today
ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದೆ. ಕಾಳುಮೆಣಸು ಬೆಲೆ ಮತ್ತು ಕೊಬ್ಬರಿ ಬೆಲೆಯೂ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.

ವಾರದ ಆರಂಭದಲ್ಲಿ ಅಡಿಕೆ ಬೆಲೆ ಕೊಂಚ ಏರಿಕೆ ಕಂಡು ಬೆಳೆಗಾರರಿಗೆ ನೆಮ್ಮದಿ ತಂದಿತ್ತು. ಆದರೆ ಈಗ ಎರಡು ದಿನಗಳಿಂದ ಮತ್ತೆ ಯಥಾ ಸ್ಥಿತಿಯಲ್ಲಿದೆ. ಹೊಸ ಅಡಿಕೆ ಬೆಲೆ 490 ರೂ.ಗಳಷ್ಟಾಗಿತ್ತು. ಇಂದೂ ಅದೇ ಬೆಲೆಯಿದೆ.  ಹಳೆ ಅಡಿಕೆ ಬೆಲೆ 530 ರೂ.ಗಳಷ್ಟಾಗಿತ್ತು. ಇಂದೂ ಅದೇ ಬೆಲೆಯಿದೆ. ಇನ್ನು ಡಬಲ್ ಚೋಲ್ ಬೆಲೆಯೂ 530 ರೂ.ಗಳಷ್ಟೇ ಇದೆ.

ಹೊಸ ಪಟೋರ  ದರ ಮತ್ತು ಹಳೆ ಪಟೋರ ದರದಲ್ಲೂ ಯಾವುದೇ ಏರಿಕೆ ಅಥವಾ ಇಳಿಕೆಯಿಲ್ಲ. ಇವೆರಡರ ದರ 370 ರೂ. ಗಳಷ್ಟೇ ಇದೆ.  ಹೊಸ ಉಳ್ಳಿ ದರದಲ್ಲಿ ವ್ಯತ್ಯಾಸವಾಗಿಲ್ಲ. ಇಂದೂ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 225 ರೂ.ಗಳಾಗಿದೆ. ಹೊಸ ಕೋಕ ಮತ್ತು ಹಳೆ ಕೋಕ ದರ ಯಥಾಸ್ಥಿತಿಯಲ್ಲಿದ್ದು ಇಂದು ದರ 280 ರೂ.ಗೆ ಬಂದು ತಲುಪಿದೆ.

ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಬೆಲೆಯಲ್ಲಿ ಇಂದು ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ ಎನ್ನುವಂತಿದೆ. ಇಂದು ಕಾಳುಮೆಣಸು ಬೆಲೆ 685 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಯಥಾಸ್ಥಿತಿಯಲ್ಲಿದ್ದು 255 ರೂ.ಗಳಷ್ಟಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಶ್ಚಿಯನ್ನರಲ್ಲೂ ಬ್ರಾಹ್ಮಣ, ರೆಡ್ಡಿ ಇಷ್ಟೊಂದು ಜಾತಿನಾ: ಬಿಜೆಪಿ ಟೀಕೆ