Publish Date: Mon, 07 Jul 2025 (12:50 IST)
Updated Date: Mon, 07 Jul 2025 (12:52 IST)
ಬೆಂಗಳೂರು: ವಾರದ ಆರಂಭದಲ್ಲಾದರೂ ಅಡಿಕೆ ಬೆಲೆ ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆಯಾಗಿದೆ. ಅಡಿಕೆ ಬೆಲೆಯಲ್ಲಿ ಇಂದು ಯಾವುದೇ ವ್ಯತ್ಯಾಸವಾಗಿಲ್ಲ. ಕಾಳು ಮೆಣಸು, ಕೊಬ್ಬರಿ ಬೆಲೆ ಕೂಡಾ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ವಾರದ ಆರಂಭದಲ್ಲೇ ಇಳಿಕೆಯಾಗಿ ರೈತರಿಗೆ ನಿರಾಸೆಯಾಗಿದೆ. ಆದರೆ ಈಗ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹೊಸ ಅಡಿಕೆ ಬೆಲೆ ಮೊನ್ನೆಯಿಂದ 475 ರೂ.ಗಳಷ್ಟಿದೆ. ಇಂದೂ ಅದೇ ಬೆಲೆ ಮುಂದುವರಿದಿದೆ. ಹಳೆ ಅಡಿಕೆ ಬೆಲೆ ಹಲವು ದಿನಗಳಿಂಧ ಯಥಾ ಸ್ಥಿತಿಯಲ್ಲಿದೆ. ಹಳೆ ಅಡಿಕೆ ಬೆಲೆ ಇಂದೂ ಗರಿಷ್ಠ 525 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 525 ರೂ.ಗಳಾಗಿವೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರ ತಲಾ 370 ರೂ.ಗಳಷ್ಟಿತ್ತು. ಕಳೆದ ಕೆಲವು ದಿನಗಳಿಂದ ಇವೆರಡರ ಬೆಲೆಯೂ ಅದೇ ಸ್ಥಿತಿಯಲ್ಲಿದೆ. ಹೊಸ ಉಳ್ಳಿ ದರದಲ್ಲಿ ಇಳಿಕೆಯಾಗಿದೆ. ಇಂದೂ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 225 ರೂ.ಗಳಾಗಿದೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲೂ ವ್ಯತ್ಯಾಸವಾಗಿಲ್ಲ. ಇವೆರಡರ ದರ ಈಗ 275 ರೂ.ಗೆ ಬಂದು ತಲುಪಿದೆ.
ಕಾಳುಮೆಣಸು, ಕೊಬ್ಬರಿ ದರ
ಕಳೆದ ವಾರ ಕಾಳುಮೆಣಸು ಮತ್ತು ಕೊಬ್ಬರಿ ಬೆಲೆಯಲ್ಲಿ ಏರಿಕೆಯಾಗಿತ್ತು. ಆದರೆ ಇಂದು ಕಾಳುಮೆಣಸು ದರ ಯಥಾಸ್ಥಿತಿಯಲ್ಲಿದ್ದು 655 ರೂ.ಗಳಷ್ಟಿವೆ. ಒಣ ಕೊಬ್ಬರಿ ಬೆಲೆ ಇಂದು 260 ರೂ.ಗಳಾಗಿದೆ.