Publish Date: Sat, 24 Aug 2019 (09:13 IST)
Updated Date: Sat, 24 Aug 2019 (09:14 IST)
ನವದೆಹಲಿ : ಏರ್ಟೆಲ್ ಜಿಯೋ ಕಂಪೆನಿಯ ಗಿಗಾ ಫೈಬರ್ಗೆ ಸೆಡ್ ಹೊಡೆಯಲು ತನ್ನ ಬ್ರಾಡ್ ಬ್ಯಾಂಡ್ ಸೇವೆಯಲ್ಲಿನ ಡೇಟಾವನ್ನು ಮತ್ತಷ್ಟು ಪರಿಷ್ಕರಿಸಿದ್ದು, ಆ ಮೂಲಕ ಮೂರು ಸೇವೆಯನ್ನು ಬಿಡುಗಡೆ ಮಾಡಿದೆ.
ಏರ್ಟೆಲ್ ವಿ- ಬ್ರಾಡ್ಬ್ಯಾಂಡ್ ಸೇವೆಯ ರೂ. 799 ರ ಪ್ಲ್ಯಾನ್ ಒಂದು ತಿಂಗಳ ಕಾಲವಧಿಯನ್ನು ಹೊಂದಿದ್ದು, ಇದರ ಮೂಲಕ ಲ್ಯಾಂಡ್ ಲೈನ್ ಟೆಲಿಫೋನ್ ಸೇವೆ ಹಾಗೂ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಸೇವೆಯನ್ನು ಒದಗಿಸುತ್ತಿದೆ. ಅಲ್ಲದೇ ಆರು ತಿಂಗಳ ಅವಧಿಗೆ 200GB ಉಚಿತ ಡೇಟಾವನ್ನು ಬೋನಸ್ ನೀಡಲಿದೆ. ಇದರಲ್ಲಿ ಇಂಟರ್ ನೆಟ್ ಸ್ಟೀಡ್ 40Mbps ವೇಗದಲ್ಲಿರುತ್ತದೆ. ಈ ಸೇವೆಯನ್ನು ಅಳವಡಿಸಿಕೊಂಡ ಗ್ರಾಹಕರು ಏರ್ಟೆಲ್ ಟಿವಿ ಪ್ರಿಮಿಯಂ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಏರ್ಟೆಲ್ ನ ರೂ.1099ರ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ ತಿಂಗಳಿಗೆ 300GB ಡೇಟಾ ಸಿಗಲಿದೆ. ಈ ಸೇವೆಯಲ್ಲಿ ಇಂಟರ್ ನೆಟ್ ಸ್ಪೀಡ್ 100mbps ಇರಲಿದೆ. ಜೊತೆಗೆ 6 ತಿಂಗಳಕಾಲ 500GB ಡೇಟಾ ಬೋನಸ್ ರೂಪದಲ್ಲಿ ಸಿಗಲಿದೆ. ಜೊತೆಗೆ ಏರ್ಟೆಲ್ ಥ್ಯಾಂಕ್ಸ್ ಮೂಲಕ ಏರ್ಟೆಲ್ ಎಕ್ಸ್ ಟ್ರಿಮಿ ಮತ್ತು ಝೀ 5 ಪ್ರೀಮಿಯಂ ಸೇವೆಯನ್ನು ಹಾಗೂ ಅಮೆಜಾನ್ ಪ್ರೈಮ್ ಸಬ್ಸ್ಕ್ರಿಪ್ಷನ್ ಮೂಲಕ ಮೂರು ತಿಂಗಳ ಕಾಲ ನೆಟ್ ಫ್ಲಿಕ್ ಮೆಂಬರ್ ಶಿಪ್ ಅವಕಾಶವನ್ನು ಪಡೆಯಬಹುದಾಗಿದೆ.
ಏರ್ಟೆಲ್ ನ ರೂ.1599ರ ಪ್ಲ್ಯಾನ್ ನಲ್ಲಿ ತಿಂಗಳಿಗೆ 600GB ಡೇಟಾದ ಜೊತೆಗೆ 300 mbpsಸ್ಟೀಡ್ ನಲ್ಲಿ ಈ ಸೇವೆಯನ್ನು ಪಡೆಯಬಹುದಾಗಿದೆ. ನಂತರ ಆರು ತಿಂಗಳ ಕಾಲವಕಾಶದ 1000GB ಇಂಟರ್ ನೆಟ್ ಸೇವೆಯನ್ನು ಒದಗಿಸುತ್ತಿದೆ. ಹಾಗೇ ಲೈನ್ ಫೋನ್ ಹಾಗೂ ಅನಿಯಮಿತ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕರೆ ಉಚಿತವಾಗಿ ದೊರೆಯಲಿದೆ. ಏರ್ಟೆಲ್ ಥ್ಯಾಂಕ್ಸ್ ಮೂಲಕ ಝೀ5 ಪ್ರಿಮಿಯಂ ಹಾಗೂ ಒಂದು ವರ್ಷದ ಅಮೆಜಾನ್ ಪ್ರೈಮ್ ಸಬ್ ಸ್ಕ್ರಿಪ್ಷನ್ ಜೊತೆಗೆ ಮೂರು ತಿಂಗಳ ಕಾಲ ನೆಟ್ ಫ್ಲಿಕ್ಸ್ ಅನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ