Select Your Language

Notifications

webdunia
webdunia
webdunia
webdunia

ಐದು ಸಾವಿರ ವರ್ಷ ಬಾಳಿಕೆ ಬರುವ ಬ್ಯಾಟರಿ ಇದು!

ಐದು ಸಾವಿರ ವರ್ಷ ಬಾಳಿಕೆ ಬರುವ ಬ್ಯಾಟರಿ ಇದು!
Bangalore , ಶನಿವಾರ, 3 ಡಿಸೆಂಬರ್ 2016 (10:51 IST)
ನ್ಯೂಕ್ಲಿಯರ್ ವೇಸ್ಟ್‌ನಿಂದ ಒಂದು ವಿನೂತನವಾದಂತ ಬ್ಯಾಟರಿಯನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಡೈಮಂಡ್ ಬ್ಯಾಟರಿ ಎಂದು ಹೆಸರಿಟ್ಟಿರುವ ಇದು ಸುಮಾರು ವರ್ಷಗಳ ವರೆಗೂ ಕೆಲಸ ಮಾಡುತ್ತಂತೆ. ಬ್ರಿಟನ್‌ನಲ್ಲಿನ ಯೂನಿವರ್ಸಿಟಿ ಆಫ್ ಬ್ರಿಸ್ಟಾಲ್ಸ್ ನ ಪ್ರೊಫೆಸರ್ ಟಾಮ್ ಸ್ಕಾಟ್ ತಂಡ ಈ ಬ್ಯಾಟರಿಯನ್ನು ಸಂಶೋಧಿಸಿದೆ. 
 
ಈ ಬ್ಯಾಟರಿಗೆ ಮೆಯಿಂಟೆನ್ಸ್ ಬೇಕಾಗಿಲ್ಲವಂತೆ. ಈ ಸಂಶೋಧನೆಯಿಂದ ಅಣು ವ್ಯರ್ಥಗಳ ಸಮಸ್ಯೆಗೆ ಪರಿಹಾರ, ಶುದ್ಧವಾದ ವಿದ್ಯುತ್ ಉತ್ಪತ್ತಿ, ಬ್ಯಾಟರಿ ಲೈಫ್ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗಿದೆ ಎಂದಿದ್ದಾರೆ. 
 
ಉದಾಹರಣೆ ಹೇಳಬೇಕೆಂದರೆ ಈ ಬ್ಯಾಟರಿಯನ್ನು 2016ರಲ್ಲಿ ತಯಾರಿಸಿದರೆ ಅದು 7746 (ಸುಮಾರು 5 ಸಾವಿರ ವರ್ಷ) ಕೆಲಸ ಮಾಡುತ್ತದೆ ಎನ್ನುತ್ತಾರೆ ಪ್ರೊ. ಟಾಮ್. ಈ ಬ್ಯಾಟರಿಯನ್ನು ಡ್ರೋನ್‌ಗಳು, ಸ್ಯಾಟಲೈಟ್, ಅಂತರಿಕ್ಷ ನೌಕೆಗಳಲ್ಲಿ ಬಳಸಬಹುದು. 
 
ಈ ಬ್ಯಾಟರಿಯಲ್ಲಿ ವಿದ್ಯುತ್ 5,730 ವರ್ಷಕ್ಕೆ ಶೇ.50, 11 ಸಾವಿರ ವರ್ಷಕ್ಕೆ ಶೇ.25ರಷ್ಟು ಕಡಿಮೆಯಾಗುತ್ತದೆ ಎಂದಿದ್ದಾರೆ. ಇನ್ನೇನು ಈ ಬ್ಯಾಟರಿ ಮಾರುಕಟ್ಟೆಗೆ ಬಂದರೆ ಜೀವನ ಪೂರ್ತಿ ಒಂದೇ ಬ್ಯಾಟರಿಯಲ್ಲಿ ಕಳೆಯಬಹುದು. ಆದಷ್ಟು ಬೇಗ ಬರುವಂತಾಗಲಿ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

2017 ರ ಜನವರಿ 29ರಂದು ಪಿಡಿಓ ಸ್ಪರ್ಧಾತ್ಮಕ ಪರೀಕ್ಷೆ