Select Your Language

Notifications

webdunia
webdunia
webdunia
webdunia

2017 ರ ಜನವರಿ 29ರಂದು ಪಿಡಿಓ ಸ್ಪರ್ಧಾತ್ಮಕ ಪರೀಕ್ಷೆ

2017 ರ ಜನವರಿ 29ರಂದು ಪಿಡಿಓ ಸ್ಪರ್ಧಾತ್ಮಕ ಪರೀಕ್ಷೆ
Bangalore , ಶನಿವಾರ, 3 ಡಿಸೆಂಬರ್ 2016 (09:20 IST)
ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೃಂದದ ನೇರ ನೇಮಕಾತಿ ಕೋಟಾದಲ್ಲಿ ಖಾಲಿ ಇರುವ 815 ಹುದ್ದೆಗಳು ಮತ್ತು ಗ್ರಾಮಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ವೃಂದದ 809 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 2017 ರ ಜನವರಿ 29 ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ ಹೇಳಿದ್ದಾರೆ.
 
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಅವರ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ 7 ತಾಲೂಕುಗಳಲ್ಲಿ ಒಟ್ಟು 271 ಗ್ರಾಮ ಪಂಚಾಯಿತಿಗಳಿವೆ. ಜಿಲ್ಲೆಯಲ್ಲಿ 165 ಪಿಡಿಓಗಳಿದ್ದಾರೆ. 106 ಹುದ್ದೆಗಳು ಖಾಲಿ ಇವೆ. 
 
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ 47 ಗ್ರಾಮಪಂಚಾಯಿತಿಗಳಲ್ಲಿ 28 ಪಿಡಿಓ ಗಳಿದ್ದಾರೆ, 19 ಹುದ್ದೆಗಳು ಖಾಲಿ ಇವೆ. ಚನ್ನಗಿರಿ ತಾಲೂಕಿನ 61 ಗ್ರಾಮಪಂಚಾಯಿತಿಗಳಲ್ಲಿ 45 ಪಿಡಿಓ ಗಳಿದ್ದಾರೆ, 16 ಹುದ್ದೆಗಳು ಖಾಲಿ ಇವೆ. ಹೊಸ ನೇಮಕಾತಿ ಬಳಿಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಲೋಡ್‍ಶೆಡ್ಡಿಂಗ್ ತಪ್ಪಿಸಲು ಕ್ರಮ: ಡಿಕೆಶಿ