Select Your Language

Notifications

webdunia
webdunia
webdunia
webdunia

ಇದೀಗ ಖಾಸಗಿಯವರಿಗಿಂತ ಸರಕಾರಿ ನೌಕರರಿಗೆ ಹೆಚ್ಚಿನ ವೇತನ: ಅರುಣ್ ಜೇಟ್ಲಿ

ಇದೀಗ ಖಾಸಗಿಯವರಿಗಿಂತ ಸರಕಾರಿ ನೌಕರರಿಗೆ ಹೆಚ್ಚಿನ ವೇತನ: ಅರುಣ್ ಜೇಟ್ಲಿ
ನವದೆಹಲಿ , ಶುಕ್ರವಾರ, 1 ಜುಲೈ 2016 (19:00 IST)
7 ನೇಯ ವೇತನ ಆಯೋಗದ ಶಿಫಾರಸ್ಸನ್ನು ಕೇಂದ್ರ ಸಂಪುಟ ಅಂಗೀಕರಿಸಿದ್ದು, ಕೇಂದ್ರ ಸರಕಾರಿ ನೌಕರರ ವೇತನ ಮತ್ತು ತುಟ್ಟಿಭತ್ತೆಯನ್ನು 23.5 ಹೆಚ್ಚಳ ಮಾಡಿದೆ. ಈ ಹಿನ್ನೆಲೆಯಲ್ಲಿ ಒಂದು ಕೋಟಿ ಸರಕಾರಿ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಪ್ರಯೋಜನೆಯಾಗಲಿದೆ. 
 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ಪಾಲ್ಗೊಂಡ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, 7 ನೇಯ ವೇತನ ಆಯೋಗದಿಂದ ಐತಿಹಾಸಿಕ ವೇತನ ಏರಿಕೆ ಪ್ರಯೋಜನ ಪಡೆಯುವ ಕೇಂದ್ರ ಸರಕಾರಿ ಹಿರಿಯ ಅಧಿಕಾರಿ, ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಶುಭಾಷಯ ಕೋರಿ ಟ್ವೀಟ್ ಮಾಡಿದ್ದಾರೆ.
 
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, 7 ನೇಯ ವೇತನ ಆಯೋಗದ ಶಿಫಾರಸ್ಸನ್ನು ಅಂಗೀಕರಿಸಿದ್ದು, ಪ್ರಸಕ್ತ ಸಾಲಿನ ಜನವರಿಯಿಂದ ಜಾರಿಯಾಗಲಿದೆ. ಮತ್ತು ಇದೇ ವರ್ಷ ಬಾಕಿ ವೇತನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. 7 ನೇ ವೇತನ ಶಿಫಾರಸನ್ನು ಜಾರಿ ಮಾಡಿರುವುದುರಿಂದ ಸರಕಾರದ ಬೊಕ್ಕಸಕ್ಕೆ ಒಟ್ಟು 102.100 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ತಿಳಿಸಿದ್ದಾರೆ.
 
7ನೇ ವೇತನ ಆಯೋಗವು ಸರಕಾರಿ ನೌಕರರ ಆರಂಭಿಕ ವೇತನವನ್ನು 7,000 ರೂಪಾಯಿಗಳಿಂದ 18 ಸಾವಿರ ರೂಪಾಯಿಗಳಿಗೆ ಎರಿಕೆ ಮಾಡುವಂತೆ ಶಿಫಾರಸ್ಸು ಮಾಡಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹೀಂದ್ರಾ ವಾಹನಗಳ ಮಾರಾಟದಲ್ಲಿ ಶೇ.8 ರಷ್ಟು ಹೆಚ್ಚಳ