Select Your Language

Notifications

webdunia
webdunia
webdunia
webdunia

ಮಹೀಂದ್ರಾ ವಾಹನಗಳ ಮಾರಾಟದಲ್ಲಿ ಶೇ.8 ರಷ್ಟು ಹೆಚ್ಚಳ

ಮಹೀಂದ್ರಾ ವಾಹನಗಳ ಮಾರಾಟದಲ್ಲಿ ಶೇ.8 ರಷ್ಟು ಹೆಚ್ಚಳ
ನವದೆಹಲಿ , ಶುಕ್ರವಾರ, 1 ಜುಲೈ 2016 (18:53 IST)
ಮಹೀಂದ್ರಾ & ಮಹೀಂದ್ರಾ ಸಂಸ್ಥೆಯ ಜೂನ್ ತಿಂಗಳ ಒಟ್ಟು ವಾಹನ ಮಾರಾಟದಲ್ಲಿ 5 ಪ್ರತಿಶತ ಹೆಚ್ಚಳವಾಗಿ 34,991 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 33,282 ಕಾರುಗಳು ಮಾರಾಟವಾಗಿದ್ದವು ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 
ಮಹೀಂದ್ರಾ & ಮಹೀಂದ್ರಾ ಸಂಸ್ಥೆಯ ರಫ್ತು ವಹಿವಾಟಿನಲ್ಲಿ 41 ಪ್ರತಿಶತ ಹೆಚ್ಚಳವಾಗಿ 4,020 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೆ ಅವಧಿಯಲ್ಲಿ 2,852 ವಾಹನಗಳನ್ನು ಮಾರಾಟವಾಗಿದ್ದವು
 
ಸ್ಕಾರ್ಪಿಯೋ, ಎಕ್ಸ್‌ಯುವಿ-500, ಜೈಲೋ, ಬೊಲೇರೋ ಮತ್ತು ವೆರಿಟೋ ಸೇರಿದಂತೆ ಪ್ಯಾಸೆಂಜರ್ ವಿಭಾಗದ ಕಾರುಗಳ ಮಾರಾಟದಲ್ಲಿ 7 ಪ್ರತಿಶತ ಚೇತರಿಕೆ ಕಂಡು 17,070 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 15,880 ಕಾರುಗಳು ಮಾರಾಟವಾಗಿದ್ದವು.
 
ವಾಣಿಜ್ಯ ವಾಹನಗಳ ಮಾರಾಟದಲ್ಲಿ 6 ಪ್ರತಿಶತ ಹೆಚ್ಚಳವಾಗಿ 13,540 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 12,737 ವಾಹನಗಳು ಮಾರಾಟವಾಗಿದ್ದವು ಎಂದು ಮಹೀಂದ್ರಾ & ಮಹೀಂದ್ರಾ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 
ದೇಶದಲ್ಲಿ ಉತ್ತಮ ಮುಂಗಾರು ಸುರಿಯುವ ಹಿನ್ನೆಲೆಯಲ್ಲಿ ವಾಹನಗಳ ಮಾರಾಟ ಚೇತರಿಕೆ ಕಂಡಿದೆ ಎಂದು  ಮಹೀಂದ್ರಾ & ಮಹೀಂದ್ರಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ ಶಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಸಾಮೂಹಿಕ ಅತ್ಯಾಚಾರ; ಗುಪ್ತಾಂಗದಲ್ಲಿ ತುರುಕಿದರು ಕೋಲು, ಗನ್ ಬ್ಯಾರೆಲ್