Select Your Language

Notifications

webdunia
webdunia
webdunia
webdunia

ವಾಲ್ಟ್ ಡಿಸ್ನಿಯಿಂದ 7000 ಉದ್ಯೋಗಿಗಳ ವಜಾ

ವಾಲ್ಟ್ ಡಿಸ್ನಿಯಿಂದ 7000 ಉದ್ಯೋಗಿಗಳ ವಜಾ
ಅಮೆರಿಕ , ಭಾನುವಾರ, 12 ಫೆಬ್ರವರಿ 2023 (19:05 IST)
ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ ಪರ್ವ ಮುಂದುವರಿದಿದ್ದು, 7,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಅಮೆರಿಕದ ಮನರಂಜನಾ ಮಾಧ್ಯಮ ವಾಲ್ಟ್ ಡಿಸ್ನಿ ಘೋಷಿಸಿದೆ. ಬಾಬ್ ಐಗರ್  ಕಂಪನಿಯ CEO ಆಗಿ ಅಧಿಕಾರ ಸ್ವೀಕರಿಸಿದ ನಂತರ ಕೈಗೊಂಡ ಮಹತ್ವದ ಕ್ರಮ ಇದಾಗಿದೆ. ಅಮೆರಿಕದ ಅನೇಕ ತಂತ್ರಜ್ಞಾನ ಕಂಪನಿಗಳು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿವೆ. ಇದೀಗ ಇತರ ಕ್ಷೇತ್ರಗಳಲ್ಲೂ ಉದ್ಯೋಗ ಕಡಿತ ಆರಂಭವಾಗಿದೆ. ಆರ್ಥಿಕ ಅನಿಶ್ಚಿತತೆ, ಲಾಭ ಕುಸಿತ ಮತ್ತಿತರ ಕಾರಣಗಳಿಂದ ಅಮೆರಿಕದ ಕಂಪನಿಗಳು 
ವೆಚ್ಚ ಕಡಿತಕ್ಕಾಗಿ ಉದ್ಯೋಗಿಗಳ ವಜಾ ಮೊರೆ ಹೋಗುತ್ತಿವೆ ಎಂದು ‘ಎಎಫ್​​ಪಿ’ ಸುದ್ದಿಸಂಸ್ಥೆ ವರದಿ ಮಾಡಿದೆ.
‘ಕೇವಲ ಲಘುವಾಗಿ ಈ ನಿರ್ಧಾರ ಕೈಗೊಂಡಿಲ್ಲ. ವಿಶ್ವದಾದ್ಯಂತ ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪ್ರತಿಭೆ ಮತ್ತು ಅವರ ಸಮರ್ಪಣಾ ಮನೋಭಾವದ ಕೆಲಸದ ಬಗ್ಗೆ ಅಪಾರ ಗೌರವ ಇದೆ’ ಎಂದು ಇತ್ತೀಚೆಗೆ ತ್ರೈಮಾಸಿಕ ಫಲಿತಾಂಶ ಘೋಷಿಸುವ ಸಂದರ್ಭದಲ್ಲಿ ಬಾಬ್ ಐಗರ್ ಹೇಳಿದ್ದರು. 2021ರ ಅಕ್ಟೋಬರ್​​ನಲ್ಲಿ ಪ್ರಕಟವಾಗಿದ್ದ ವಾರ್ಷಿಕ ವರದಿಯ ಪ್ರಕಾರ ಡಿಸ್ನಿಯಲ್ಲಿ ಜಾಗತಿಕವಾಗಿ ಒಟ್ಟು 1,90,000 ಉದ್ಯೋಗಿಗಳಿದ್ದಾರೆ. ಈ ಪೈಕಿ ಶೇ 80ರಷ್ಟು ಮಂದಿ ಪೂರ್ಣಕಾಲಿಕ ಉದ್ಯೋಗಿಗಳಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆನೆಯ ಜೀವ ಉಳಿಸಿದ ಭಾರತೀಯ ಸೇನೆ