ಆರ್`ಬಿಐನ 50 ರೂ. ಹೊಸ ನೋಟಿನ ಫೋಟೋ ಲೀಕ್

Webdunia
ಶುಕ್ರವಾರ, 18 ಆಗಸ್ಟ್ 2017 (17:55 IST)
ಕಳೆದ ವರ್ಷ ನವೆಂಬರ್`ನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ 1000 ಮತ್ತು 500 ರೂ. ನೋಟುಗಳನ್ನ ಅಮಾನ್ಯಗೊಳಿಸಿದ ಬಳಿಕ ಜನಸಾಮಾನ್ಯರ ದಿನನಿತ್ಯದ ವಹಿವಾಟಿಗಾಗಿ 50 ಮತ್ತು 10 ರೂಪಾಯಿ ನೋಟು ಬಿಡುಗಡೆ ಆರ್`ಬಿಐ ಘೋಷಿಸಿತ್ತು.
 

ಇದಾದ ಬಳಿಕ 50 ಮತ್ತು 10 ರೂಪಾಯಿ ನೋಟಿನ ಬಗ್ಗೆ ಸುದ್ದಿಯೇ ಇರಲಿಲ್ಲ. ಇದೀಗ,  50 ರೂಪಾಯಿ ನೋಟುಗಳ ಸುದ್ದಿ ಪ್ರತ್ಯಕ್ಷವಾಗಿದೆ. ಆರ್`ಬಿಐ ಮುದ್ರಿಸಿದೆ ಎನ್ನಲಾದ 50 ರೂ. ನೋಟುಗಳ ಬಂಡಲ್`ನ ಇಮೇಜ್ ಆನ್`ಲೈನ್`ನಲ್ಲಿ ಲೀಕ್ ಆಗಿದೆ. ತೆಳು ಹಸಿರು ಬಣ್ಣದ ನೋಟು ಇದಾಗಿದ್ದು, ಚಲಾವಣೆಯಲ್ಲಿರುವ 50 ರೂ. ನೋಟುಗಳಿಗಿಂತ ವಿಭಿನ್ನವಾಗಿದೆ. 2005ನೇ ಮಹಾತ್ಯಾಗಾಂಧಿ ಫೋಟೋ ಒಳಗೊಂಡಿರುವ ನೊಟುಗಳು ಇವಾಗಿವೆ.

ಆನ್`ಲೈನ್`ನಲ್ಲಿ ಲೀಕ್ ಆಗಿರುವ ಈ ಇಮೇಜ್ ಬಗ್ಗೆ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹೊಸ ನೋಟಿನ ಭದ್ರತಾ ಲಕ್ಷಣಗಳು ಹಳೆಯ ನೋಟುಗಳ ರೀತಿಯೇ ಇರಲಿವೆ ಎನ್ನಲಾಗಿದೆ.   

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಋತುಚಕ್ರ ಮುಂದೂಡಲು ಮಾತ್ರೆ ತೆಗೆದುಕೊಳ್ಳಬಹುದೇ, ಡಾ ಪದ್ಮಿನಿ ಪ್ರಸಾದ್ ಹೇಳಿದ್ದೇನು

ಸಂಬಳ ಕೊಡಕ್ಕೆ ದುಡ್ಡಿಲ್ಲ, ಗುಂಡಿ ಮುಚ್ಚಲು ಹಣವಿಲ್ಲ, ಟ್ಯಾಕ್ಸ್ ದುಡ್ಡು ಏನ್ಮಾಡ್ತೀರಿ ಸ್ವಾಮಿ: ಆರ್ ಅಶೋಕ್

ಪ್ರಿಯಾಂಕ್ ಖರ್ಗೆ ಓದಿದ್ದು ಎಸ್ಎಸ್ಎಲ್ ಸಿನಾ, ಪಿಯುಸಿನಾ: ಈ ಕನ್ ಫ್ಯೂಷನ್ ಸರಿ ಮಾಡಿ ಸಾರ್ ನೆಟ್ಟಿಗರಿಂದ ಟ್ರೋಲ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments