Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಬರಲಿದೆ 200 ರೂ. ನೋಟು.. ?

ಸದ್ಯದಲ್ಲೇ ಬರಲಿದೆ 200 ರೂ. ನೋಟು.. ?
ನವದೆಹಲಿ , ಮಂಗಳವಾರ, 4 ಜುಲೈ 2017 (17:32 IST)
ನೋಟ್ ಬ್ಯಾನ್ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಮತ್ತು 500 ರೂಪಾಯಿ ನೋಟುಗಳನ್ನ ಬಿಡುಗಡೆ ಮಾಡಿತ್ತು. ಇದೀಗ, ಸದ್ಯದಲ್ಲೇ 200 ರೂಪಾಯಿ ನೋಟುಗಳು ಸಹ ಚಲಾವನೆಗೆ ಬರಲಿವೆ ಎನ್ನುತ್ತಿವೆ ವರದಿಗಳು.
 

ಸರ್ಕಾರಿ ಅಧಿಕಾರಿಗಳು ಎಎನ್`ಐಗೆ ನೀಡಿರುವ ಮಾಹಿತಿ ಪ್ರಕಾರ, 200 ರೂಪಾಯಿಯ ಮುದ್ರಣಕ್ಕೆ ಈಗಾಗಲೇ ಆದೇಶ ಹೊರಬಿದ್ದಿದೆ. ಮಾರ್ಚ್`ನಲ್ಲೇ ಹಣಕಾಸು ಸಚಿವರ ಒಪ್ಪಿಗೆ ಪಡೆದಿರುವ ಆರ್`ಬಿಐ ಮುದ್ರಣ ಆರಂಭಿಸಿದೆ. ಆದರೆ, ಈ ಬಗ್ಗೆ ಆರ್`ಬಿಐನಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಹೊಸದಾಗಿ ಚಲಾವಣೆ ಬರಲಿವೆ ಎನ್ನಲಾಗುತ್ತಿರುವ 200 ರೂ. ನೋಟುಗಳು ಪ್ಲಾಸ್ಟಿಕ್ ನೋಟ್ ಆಗಿರಲಿದ್ದು, ನಕಲು ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ. ಇದರ ಜೊತೆಗೆ 200 ರೂ ನೋಟು ದೇಶಾದ್ಯಂತ ಸೃಷ್ಟಿಯಾಗಿರುವ ಚಿಲ್ಲರೆ ಸಮಸ್ಯೆಗೆ ಪರಿಹಾರ ನೀಡಲಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ?