ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡು ಸತತ ಗೆಲುವಿನ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಮೇಲೇರಿದೆ. ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಡಿ ವಿಲಿಯರ್ಸ್ ಮೂಲಕ ಉತ್ತಮ ಬ್ಯಾಟಿಂಗ್ ಬಲವನ್ನು ಹೊಂದಿದ್ದು, ಬ್ಯಾಟಿಂಗ್ ಶಕ್ತಿಯ ಮೂಲಕವೇ ಪಂದ್ಯಗಳನ್ನು ಗೆಲ್ಲುತ್ತಿದೆ.
ರಾಯಲ್ ಚಾಲೆಂಜರ್ಸ್, ಬೆಂಗಳೂರು( ಪಾಯಿಂಟ್ 12, ನೆಟ್ ರನ್ ರೇಟ್ +0.640)
ಉಳಿದ ಪಂದ್ಯಗಳು
ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ, ಬೆಂಗಳೂರು, 18 ಮೇ 2016
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ, ರಾಯ್ ಪುರ 22 ಮೇ 2016
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ, ಅದು 16 ಪಾಯಿಂಟ್‌ಗಳನ್ನು ಗಳಿಸಿ ಪ್ಲೇ ಆಫ್ ಹಂತ ಪ್ರವೇಶಿಸುವುದು ಖಂಡಿತ. ಏಕೆಂದರೆ ಅದರ ರನ್ ರೇಟ್ ಮೇಲ್ಮಟ್ಟದಲ್ಲಿದೆ.
ಅದು ಒಂದು ಪಂದ್ಯ ಸೋತು 14 ಪಾಯಿಂಟ್‌ಗಳೊಂದಿಗೆ ಮುಗಿಸಿದರೂ ಅದರ ಸಕಾರಾತ್ಮಕ ರನ್ ರೇಟ್ ಅದರ ನೆರವಿಗೆ ಬರಬಹುದು. ಉಳಿದ ಎರಡು ಪಂದ್ಯಗಳನ್ನು ಸೋತರೆ ಮಾತ್ರ ಅದು ಪ್ಲೇಆಫ್‌ನಿಂದ ಹೊರಬೀಳುತ್ತದೆ.