ನವದೆಹಲಿ: ಟೀಂ ಇಂಡಿಯಾದಲ್ಲಿ ಈಗ ಪ್ರತಿಭಾವಂತ ವೇಗಿಗಳ ಗುಂಪೇ ಇದೆ. ಅವರಿಗೆಲ್ಲಾ ಪಾಠ ಹೇಳಲು ಮುಖ್ಯ ಕೋಚ್ ಅನಿಲ್ ಕುಂಬ್ಳೆ ಇದ್ದರೆ ಸಾಲದು. ವೇಗಿಗಳಿಗೆಂದೇ ಪ್ರತ್ಯೇಕ ಕೋಚ್ ಬೇಕೆಂದು ವೇಗದ ಬೌಲರ್ ಉಮೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
‘ನಮ್ಮಲ್ಲೀಗ ವಿದೇಶದಲ್ಲೂ ಗೆಲ್ಲುವಂತಹ ಪ್ರತಿಭಾವಂತ ವೇಗಿಗಳಿದ್ದಾರೆ. ಆದರೆ ನಮಗೆ ಪ್ರತ್ಯೇಕ ಕೋಚ್ ಬೇಕು. ಕೆಲವೊಮ್ಮೆ, ನಾವು ತಪ್ಪು ಮಾಡುತ್ತೇವೆ. ಆದರೆ ಅದನ್ನು ಸರಿಪಡಿಸುವುದು ಹೇಗೆಂದು ಗೊತ್ತಿರುವುದಿಲ್ಲ. ಹೀಗಾಗಿ ಬೇರೆ ಕೋಚ್ ಬೇಕು’ ಎಂಬುದು ಉಮೇಶ್ ಅಭಿಪ್ರಾಯ.
‘ಹಿಂದೊಮ್ಮೆ ನಾನು ತಪ್ಪು ಮಾಡುತ್ತಿದ್ದಾಗ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ತಿದ್ದಿದ್ದರು. ಹೇಗೆ ಬಾಲ್ ಮಾಡಬೇಕೆಂದು ಹೇಳಿಕೊಟ್ಟಿದ್ದರು. ಆದರೆ ತಜ್ಞರಿದ್ದಿದ್ದರೆ ಚೆನ್ನಾಗಿತ್ತು ಎಂದು ಯಾದವ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ