Publish Date: Mon, 11 Oct 2021 (16:55 IST)
Updated Date: Mon, 11 Oct 2021 (16:57 IST)
ದುಬೈ: ಐಪಿಎಲ್ 14 ರಲ್ಲಾದರೂ ಕಪ್ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಗುರಿಯೇನೆಂದು ಬಹಿರಂಗಪಡಿಸಿದ್ದಾರೆ.
ಇಂದು ಸಂಜೆ ನಡೆಯಲಿರುವ ಎರಡನೇ ಪ್ಲೇ ಆಫ್ ಪಂದ್ಯದಲ್ಲಿ ಕೊಹ್ಲಿ ಬಳಗ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಬಗ್ಗೆ ಕೇಳಿದಾಗ ಕೊಹ್ಲಿ, ಕ್ವಾಲಿಫೈಯರ್, ಎಲಿಮಿನೇಟರ್ ನಮ್ಮ ತಲೆಯಲ್ಲೇ ಇಲ್ಲ. ಪ್ರತಿ ಪಂದ್ಯವನ್ನೂ ಗೆಲ್ಲಬೇಕೆಂಬುದಷ್ಟೇ ನಮ್ಮ ಗುರಿ ಎಂದಿದ್ದಾರೆ.
ಎಲ್ಲಾ ಸಾಧ‍್ಯತೆಗಳನ್ನೂ ಎದುರಿಸಲು ಸಿದ್ಧರಾಗಿದ್ದೇವೆ. ಕ್ರಿಕೆಟ್ ಆಡಲಿಳಿದಾಗ ಒಂದೋ ಗೆಲ್ಲಬೇಕು, ಇಲ್ಲವೇ ಸೋಲಬೇಕು. ಈ ಎರಡು ಮನಸ್ಸಲ್ಲಿಟ್ಟುಕೊಂಡು ಕಣಕ್ಕಿಳಿದರೆ ಋಣಾತ್ಮಕ ಚಿಂತೆ ಬಾರದು. ನಮ್ಮ ಗುರಿ ಗೆಲ್ಲುವುದಕ್ಕಾಗಿ ಆಡುವುದು. ಹಾಗಂತ ಗೆಲುವೊಂದನ್ನೇ ತಲೆಯಲ್ಲಿಟ್ಟುಕೊಂಡು ಆಡಿದರೆ ನಮ್ಮ ಪ್ರದರ್ಶನವೂ ಬೇರೇ ಲೆವೆಲ್ ನಲ್ಲಿರುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.