Select Your Language

Notifications

webdunia
webdunia
webdunia
webdunia

ಐಪಿಎಲ್ 14: ರಾಯಲ್ ಚಾಲೆಂಜರ್ಸ್ ಪ್ಲೇ ಆಫ್ ಮ್ಯಾಚ್ ಇಂದು

ಐಪಿಎಲ್ 14: ರಾಯಲ್ ಚಾಲೆಂಜರ್ಸ್ ಪ್ಲೇ ಆಫ್ ಮ್ಯಾಚ್ ಇಂದು
ದುಬೈ , ಸೋಮವಾರ, 11 ಅಕ್ಟೋಬರ್ 2021 (09:20 IST)
ದುಬೈ: ಐಪಿಎಲ್ 14 ರಲ್ಲಿ ಇಂದು ಪ್ಲೇ ಆಫ್ ಹಂತದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.


ಲೀಗ್ ಹಂತದಲ್ಲಿ ಎರಡೂ ತಂಡಗಳೂ ಸಮಬಲವಾಗಿದ್ದವು. ಹಾಗಿದ್ದರೂ ಕೆಕೆಆರ್ ಗೆ ಹೋಲಿಸಿದರೆ ಆರ್ ಸಿಬಿ ಬ್ಯಾಟಿಂಗ್ ಬಲಿಷ್ಠವಾಗಿದೆ. ದೇವದತ್ತ್ ಪಡಿಕ್ಕಲ್-ಕೊಹ್ಲಿ ಉತ್ತಮ ಆರಂಭ ಕೊಟ್ಟರೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಭರತ್, ಮ್ಯಾಕ್ಸ್ ವೆಲ್ ಆಸರೆಯಾಗುತ್ತಾರೆ. ಇನ್ನು ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್-ಹರ್ಷಲ್‍ ಪಟೇಲ್, ಯಜುವೇಂದ್ರ ಚಾಹಲ್ ಎದುರಾಳಿಗಳನ್ನು ಕಟ್ಟಿಹಾಕಲು ಸಮರ್ಥರು.

ಅತ್ತ ಕೆಕೆಆರ್ ಗೆ ಆರಂಭಿಕರೇ ಶಕ್ತಿ. ಶುಬ್ನಂ ಗಿಲ್, ವೆಂಕಟೇಶ್ ಐಯರ್ ಉತ್ತಮ ಆರಂಭ ಒದಗಿಸಿದರೆ ತಂಡದ ಬ್ಯಾಟಿಂಗ್ ಮೇಲೇಳುತ್ತದೆ. ಬೌಲಿಂಗ್ ನಲ್ಲಿ ಫರ್ಗ್ಯುಸನ್, ವರುಣ್ ಚಕ್ರವರ್ತಿ ಇದುವರೆಗೆ ತಂಡಕ್ಕೆ ಆಧಾರವಾಗಿದ್ದಾರೆ. ಈ ಪಂದ್ಯದಲ್ಲಿ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದು. ಪಂದ್ಯ ಸಂಜೆ 7.30 ರಿಂದ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಚೆನ್ನೈ ಗೆಲುವಿಗೆ ಕೈಮುಗಿದು ಪ್ರಾರ್ಥಿಸಿದ ಜೀವಾ ಧೋನಿ