Select Your Language

Notifications

webdunia
webdunia
webdunia
webdunia

ಡಿ ವಿಲಿಯರ್ಸ್ ಅಬ್ಬರದ ನಡುವೆ ''ಬೆಸ್ಟ್ ಆಟಗಾರ ನಾನಲ್ಲ'' ಎಂದ ವಿರಾಟ್ ಕೊಹ್ಲಿ

ಡಿ ವಿಲಿಯರ್ಸ್ ಅಬ್ಬರದ ನಡುವೆ ''ಬೆಸ್ಟ್ ಆಟಗಾರ ನಾನಲ್ಲ'' ಎಂದ ವಿರಾಟ್ ಕೊಹ್ಲಿ
ಬೆಂಗಳೂರು , ಬುಧವಾರ, 25 ಮೇ 2016 (15:31 IST)
ರಾಯಲ್ ಚಾಲೆಂಜರ್ಸ್ 29ಕ್ಕೆ 5 ವಿಕೆಟ್ ಬಿದ್ದಿದ್ದಾಗ 159 ರನ್ ಗುರಿಯನ್ನು ಬೆನ್ನಟ್ಟುವುದು ಪ್ರಯಾಸದ ಕೆಲಸವಾಗಿ ಕಂಡಿತ್ತು. ನಾಯಕ ಕೊಹ್ಲಿ ಸೊನ್ನೆಗೆ ಔಟಾಗಿದ್ದು ಕೂಡ ಅವರಿದ್ದ ಫಾರಂಗೆ ಹೋಲಿಸಿದಾಗ ರಿಪ್ಲೇನ ಬಿಲೀವ್ ಇಟ್ ಆರ್ ನಾಟ್ ಸರಣಿಯಿಂದ ನೇರವಾಗಿ ತೆಗೆದುಕೊಂಡ ಕಥೆಯಂತಿತ್ತು. ಆದರೆ ಟ್ವಿಟ್ಟರ್‌‍ನಲ್ಲಿ ಕೊಹ್ಲಿ ಗುರಿಯನ್ನು ಮುಟ್ಟಲಾಗದಿದ್ದರೆ ಡಿ ವಿಲಿಯರ್ಸ್ ಮುಟ್ಟುತ್ತಾರೆಂಬ ಆತ್ಮವಿಶ್ವಾಸದ ಮಾತುಗಳನ್ನು ಅನೇಕ ಮಂದಿ ಬರೆದಿದ್ದರು. 

 ಅವರ ಮಾತಿನಂತೆ ಡಿ ವಿಲಿಯರ್ಸ್ ಇಕ್ಬಾಲ್ ಅಬ್ದುಲ್ಲಾ ಜತೆ 91 ರನ್ ಜತೆಯಾಟದ ಮೂಲಕ ಗುರಿ ಮುಟ್ಟಿದಾಗ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತು.
 
 ಕೆಲವು ನಿಷ್ಕ್ರಿಯ ಇನ್ನಿಂಗ್ಸ್‌ ಬಳಿಕ ಎಬಿಯ ಸ್ಫೋಟಕ ಬ್ಯಾಟಿಂಗ್ ಯಾರು ಬೆಸ್ಟ್ ಎಂಬ ಚರ್ಚೆ ಮುಂದುವರಿಕೆಗೆ ಆಸ್ಪದ ಕಲ್ಪಿಸಿದೆ. ಆದರೆ ಕೊಹ್ಲಿ ತಾವು ಶ್ರೇಷ್ಟ ಎನ್ನುವುದನ್ನು ನಂಬುವುದಿಲ್ಲ. ನಾನು ಇಲ್ಲಿ ಗೆಲುವಿನ ನಾಯಕನಾಗಿ ನಿಲ್ಲುತ್ತೇನೆಂದು ನಂಬಿರಲೇ ಇಲ್ಲ ಎಂದು ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಕೊಹ್ಲಿ ಹೇಳಿದ್ದರು.
 
ಇದೊಂದು ಚಿತ್ರಕಥೆಯಂತಿದೆ, ಪ್ಲೇ ಆಫ್ ಬೆಂಗಳೂರಿನಲ್ಲಿ ಮತ್ತು ಫೈನಲ್ ಕೂಡ ಬೆಂಗಳೂರಿನಲ್ಲಿ. ಇದು ಬೆಂಗಳೂರಿನ ಜನತೆಗೆ ಅರ್ಪಣೆ ಎಂದು ಕೊಹ್ಲಿ ಹೇಳಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಎಲಿಮಿನೇಟರ್‌ನಲ್ಲಿ ಹೋರಾಟ