ತವರಿನಲ್ಲಿ ಇಂದು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ

Sampriya
ಭಾನುವಾರ, 12 ಮೇ 2024 (14:39 IST)
Photo Courtesy X
ಬೆಂಗಳೂರು: ರಾಜಧಾನಿಯಲ್ಲಿ ಇಂದು ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಬೆಂಗಳೂರು ತಂಡಕ್ಕೆ ಇದು ಮಾಡು ಇಲ್ಲವೇ ಪಂದ್ಯವಾಗಿದೆ.

ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳು ಪ್ಲೇಆಫ್ ರೇಸ್​ನಲ್ಲಿದೆ. ಉಭಯ ತಂಡಗಳಿಗೂ ಇನ್ನು 2 ಪಂದ್ಯಗಳಿವೆ. ಎರಡರಲ್ಲೂ ಆರ್​ಸಿಬಿ ಗೆದ್ದರೆ ಒಟ್ಟು 14 ಪಾಯಿಂಟ್ಸ್ ಆಗಲಿದೆ. ಅದೇ ಡೆಲ್ಲಿ ಕ್ಯಾಪಿಟಲ್ಸ್ ತನ್ನ 2 ಮ್ಯಾಚ್​ಗಳಲ್ಲೂ ಜಯ ಸಾಧಿಸಿದರೆ 16 ಅಂಕಗಳನ್ನು ಸಂಪಾದಿಸಲಿದೆ. ಹೀಗಾಗಿ ಪ್ಲೇಆಫ್​ ರೇಸ್​ನಲ್ಲಿರುವ ಎರಡೂ ತಂಡಗಳಿಗೂ ಇಂದಿನ ಪಂದ್ಯ ಮುಖ್ಯವಾಗಲಿದೆ.

ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಮಾತ್ರ ಪ್ಲೇ ಆಫ್ ರೇಸ್​ನಲ್ಲಿ ಉಳಿಯಲಿದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತರೂ ಮುಂದಿನ ಹಂತಕ್ಕೇರಲು ಅವಕಾಶ ಹೊಂದಿರಲಿದೆ. ಆದರೆ ನೆಟ್ ರನ್ ರೇಟ್​ ಇಳಿಕೆಯಾದರೆ ಮಾತ್ರ ಅಂಕ ಪಟ್ಟಿಯಲ್ಲಿ ಆರ್​ಸಿಬಿಗಿಂತ ಕೆಳ ಸ್ಥಾನ ಪಡೆಯಲಿದೆ. ಇದಾಗ್ಯೂ ಪ್ಲೇಆಫ್ ರೇಸ್​ನಿಂದ ಹೊರಬೀಳುವುದಿಲ್ಲ.

ಈ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ರಿಷಭ್‌ ಪಂತ್‌ ಹೊರಗುಳಿಯಲಿದ್ದಾರೆ. ಹಿಂದಿನ ಪಂದ್ಯದಲ್ಲಿ ನಿಧಾನಗತಿ ಓವರ್‌ ಮಾಡಿದ್ದಕ್ಕಾಗಿ ಒಂದು ಪಂದ್ಯಕ್ಕೆ ನಿಷೇಧಕ್ಕೆ ಒಳಗಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಅಕ್ಷರ್‌ ಪಟೇಲ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಆರಂಭದ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ ಆರ್‌ಸಿಬಿ ತಂಡವು ಕಳೆದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಸತತ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇದೀಗ ತವರಿನ ಪ್ರೇಕ್ಷಕರ ಮುಂದೆ ಐದನೇ ಜಯ ಸಾಧಿಸುವತ್ತ ಚಿತ್ತ ಹರಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಖತ್ ಫನ್ನಿಯಾಗಿ ಎಂಗೇಜ್ ಮೆಂಟ್ ವಿಷ್ಯ ಹೊರಹಾಕಿದ ಸ್ಮೃತಿ ಮಂಧಾನ Video

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಮುಂದಿನ ಸುದ್ದಿ
Show comments