ಶಿಖರ್ ಧವನ್ ಅವರ ಬಿರುಸಿನ 40 ಎಸೆತಗಳಲ್ಲಿ 47 ರನ್ ಮತ್ತು ಮುಸ್ತಫಿಜುರ್ ಮತ್ತು ಭುವನೇಶ್ವರ್ ಕುಮಾರ್ ಅವರ ತಲಾ 2 ವಿಕೆಟ್ ನೆರವಿನಿಂದ ಹೈದರಾಬಾದ್ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿ ಪಾಯಿಂಟ್ ಪಟ್ಟಿಯಲ್ಲಿ ಮೇಲೇರಿದೆ.
ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗುಜರಾತ್ ಲಯನ್ಸ್ ಅನಿರೀಕ್ಷಿತ ಸೋಲನ್ನು ಅನುಭವಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ಆರಂಭದಲ್ಲೇ ಮೆಕಲಮ್ ಮತ್ತು ಡ್ವೇನ್ ಸ್ಮಿತ್ ವಿಕೆಟ್ ಕಳೆದುಕೊಂಡಿತು. ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾದರು. ಆರಾನ್ ಫಿಂಚ್ ಅಜೇಯ 51 ರನ್ ಬಾರಿಸಿದರೂ ಕೂಡ ಗುಜರಾತ್ ಲಯನ್ಸ್ 6 ವಿಕೆಟ್ ಕಳೆದುಕೊಂಡು 126 ರನ್ ಅಲ್ಪಮೊತ್ತ ಗಳಿಸಿತು.
ಇದಕ್ಕೆ ಉತ್ತರವಾಗಿ ಸನ್‌ರೈಸರ್ಸ್ ಪರ ಶಿಖರ್ ಧವನ್ ಅವರ 6 ಬೌಂಡರಿಗಳೊಂದಿಗೆ 47 ರನ್ ನೆರವಿನೊಂದಿಗೆ ಇನ್ನೂ ಒಂದು ಓವರು ಬಾಕಿವುಳಿದಿರುವಂತೆ ಗುಜರಾತ್ ಲಯನ್ಸ್ ಸ್ಕೋರನ್ನು ದಾಟಿ 5 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತು.