ಬೆಂಗಳೂರು: ಐಪಿಎಲ್ 14 ರ ಭಾಗವಾಗಲು ಯುಎಇಗೆ ತೆರಳಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಲವು ಸದಸ್ಯರು ಸಿಲಿಕಾನ್ ಸಿಟಿಗೆ ಬಂದಿಳಿದಿದ್ದಾರೆ.
ಆಗಸ್ಟ್ 29 ಕ್ಕೆ ಆರ್ ಸಿಬಿ ಯುಎಇನತ್ತ ಪ್ರಯಾಣ ಬೆಳೆಸಲಿದೆ ಎನ್ನಲಾಗಿದೆ. ಇದಕ್ಕೂ ಮೊದಲು ದೇಶೀಯ ಕ್ರಿಕೆಟಿಗರು ಬೆಂಗಳೂರಿನಲ್ಲಿ ಒಟ್ಟು ಸೇರಿದ್ದಾರೆ.
ಇಲ್ಲಿ ಏಳು ದಿನ ಕ್ವಾರಂಟೈನ್ ಅವಧಿ ಪೂರೈಸಿ ಕೊರೋನಾ ನೆಗೆಟಿವ್ ವರದಿ ಬಂದ ಬಳಿಕ ಯುಎಇಗೆ ತೆರಳಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮುಂತಾದ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಕ್ರಿಕೆಟಿಗರು ನೇರವಾಗಿ ದುಬೈಗೆ ತೆರಳಲಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!