Webdunia - Bharat's app for daily news and videos

Install App

ಐಪಿಎಲ್ 2022: ಬಟ್ಲರ್ ಸ್ಪೋಟಕ ಶತಕದಿಂದ ಹೊರಬಿದ್ದ ಆರ್ ಸಿಬಿ

Webdunia
ಶನಿವಾರ, 28 ಮೇ 2022 (08:30 IST)
ಅಹಮ್ಮದಾಬಾದ್: ಐಪಿಎಲ್ 2022 ರಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಮತ್ತೆ ಆರ್ ಸಿಬಿ ಪಾಲಿಗೆ ಕನಸಾಗಿಯೇ ಉಳಿದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ ಸಿಬಿಗೆ 7 ವಿಕೆಟ್ ಗಳ ಸೋಲಾಗಿದೆ. ಇದಕ್ಕೆ ಕಾರಣವಾಗಿದ್ದು ಜೋಸ್ ಬಟ್ಲರ್ ಭರ್ಜರಿ ಶತಕ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ಪ್ರಮುಖ ಬ್ಯಾಟಿಗರು ಕೈ ಕೊಟ್ಟರು. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್ ಸೇರಿದಂತೆ ಬಿಗ್ ಥ್ರೀ ಬ್ಯಾಟಿಗರು ವೈಫಲ್ಯ ಅನುಭವಿಸಿದರು. ನಾಯಕ ಫಾ ಡು ಪ್ಲೆಸಿಸ್ ನಿಧಾನಗತಿಯ ಇನಿಂಗ್ಸ್ ಆಗಿ 25 ರನ್ ಗಳಿಸಿದರೆ, ಕಳೆದ ಪಂದ್ಯದ ಹೀರೋ ರಜತ್ ಪಟಿದಾರ್ ಸಿಡಿದು 58 ರನ್ ಗಳ ಕಾಣಿಕೆ ನೀಡಿದರು. ಆದರೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಗರಿಂದ ಯಾವುದೇ ಕೊಡುಗೆ ಬರಲಿಲ್ಲ. 15 ಓವರ್ ಗಳವರೆಗೂ ಸುಸ್ಥಿತಿಯಲ್ಲಿದ್ದ ಆರ್ ಸಿಬಿ ಬಳಿಕ ಕುಸಿಯುತ್ತಾ ಸಾಗಿತು. ಪರಿಣಾಮ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದು ರಾಜಸ್ಥಾನ್ ಬಲಿಷ್ಠ ಬ್ಯಾಟಿಂಗ್ ಎದುರು ಏನೇನೂ ಮೊತ್ತವಾಗಿರಲಿಲ್ಲ.  ಮತ್ತೆ ಸಿಡಿದ ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸಿ 106 ರನ್ ಗಳಿಸಿ ಅಜೇಯರಾಗುಳಿದರು. ತಕ್ಕ ಸಾಥ‍್ ನೀಡಿದ ಯಶಸ್ವಿ ಜೈಸ್ವಾಲ್ 21, ಸಂಜು ಸ್ಯಾಮ್ಸನ್ 23 ರನ್ ಗಳ ಕೊಡುಗೆ ನೀಡಿದರು. ಇದರಿಂದಾಗಿ ರಾಜಸ್ಥಾನ್ 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 161 ರನ್ ಗಳಿಸುವ ಮೂಲಕ ಎರಡನೆಯ ತಂಡವಾಗಿ ಐಪಿಎಲ್ 2022 ರ ಫೈನಲ್ ಗೇರಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

29 ವರ್ಷಕ್ಕೆ ನಿಕೋಲಸ್‌ ಪೂರನ್‌ ಕ್ರಿಕೆಟ್‌ಗೆ ಗುಡ್‌ಬೈ: ಸ್ಫೋಟಕ ಬ್ಯಾಟರ್‌ನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

Bengaluru Stampede: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ RCB

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

ಮುಂದಿನ ಸುದ್ದಿ
Show comments