Webdunia - Bharat's app for daily news and videos

Install App

ಧೋನಿಗೆ ವಿಶೇಷ ಗೌರವ ಸಲ್ಲಿಸಿದ ರಾಹುಲ್: ಆಳಿಯ ನಡವಳಿಕೆಗೆ ಸುನೀಲ್ ಶೆಟ್ಟಿ ಫಿದಾ

Sampriya
ಶನಿವಾರ, 20 ಏಪ್ರಿಲ್ 2024 (17:46 IST)
Photo Courtesy X
ಮುಂಬೈ:  ನಿನ್ನೆ ಏಕಾನಾ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದ ನಂತರ ಎಂಎಸ್ ಧೋನಿ ಅವರ ಜತೆ ಕೆಎಲ್‌ ರಾಹುಲ್ ಅವರು ನಡೆದುಕೊಂಡ ರೀತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.  

ಎಲ್‌ಎಸ್‌ಜಿ ತಂಡವು ಸಿಎಸ್‌ಕೆ ವಿರುದ್ಧ 8 ವಿಕೆಟ್‌ಗಳಿಂದ ಅಮೋಘ ಆಲ್‌ರೌಂಡ್ ಪ್ರದರ್ಶನವನ್ನು ನೀಡಿ ಗೆದ್ದ ನಂತರ, ಎರಡೂ ತಂಡಗಳ ಆಟಗಾರರ ನಡುವೆ ಸಾಂಪ್ರದಾಯಿಕ ಹಸ್ತಲಾಘವ ನಡೆಯಿತು.

ಪಂದ್ಯದ ನಂತರದ ಹ್ಯಾಂಡ್‌ಶೇಕ್‌ಗಾಗಿ ಆಟಗಾರರು ಸಾಲುಗಟ್ಟಿ ನಿಂತಾಗ, ಎಲ್‌ಎಸ್‌ಜಿ ನಾಯಕ ರಾಹುಲ್ ಅವರು ಧೋನಿ ಅವರೊಂದಿಗೆ ಹಸ್ತಲಾಘವ ಮಾಡುವ ಮೊದಲು ತಮ್ಮ ಕ್ಯಾಪ್ ಅನ್ನು ತೆಗೆದರು.

ಈ ನಡವಳಿಕೆ ಕ್ರಿಕೆಟ್‌ನಲ್ಲಿ ಗೌರವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಧೋನಿಯನ್ನು ಸಮೀಪಿಸುವ ಕೆಲವೇ ಕ್ಷಣಗಳ ಮೊದಲು ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಹಸ್ತಲಾಘವ ಮಾಡುವಾಗ ರಾಹುಲ್ ತಮ್ಮ ಕ್ಯಾಪ್ ಅನ್ನು ಇಟ್ಟುಕೊಂಡಿದ್ದರು ಎಂದು ವೀಕ್ಷಕರು ಗಮನಿಸಿದ್ದಾರೆ.

ಹಲವಾರು ಅಭಿಮಾನಿಗಳು ರಾಹುಲ್ ನಡೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಇನ್ನು ರಾಹುಲ್ ಮಾವ ನಟ ಸುನೀಲ್ ಶೆಟ್ಟಿ ಕೂಡಾ ಆಳಿಯನ ನಡವಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಕೊಂಡಾಡಿದ್ದಾರೆ.

ಇದಕ್ಕೂ ಮುನ್ನ ರಾಹುಲ್ ಪತ್ನಿ ಹಾಗೂ ನಟಿ ಅಥಿಯಾ ಶೆಟ್ಟಿ ತಮ್ಮ ಪತಿಯನ್ನು ಅಭಿನಂದಿಸುತ್ತಿದ್ದರು. ಕೆಎಲ್ ರಾಹುಲ್ ಅರ್ಧಶತಕ ಗಳಿಸುತ್ತಿದ್ದಂತೆ, ಅಥಿಯಾ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದಳು, ಪಂದ್ಯದ ಮುಖ್ಯಾಂಶವನ್ನು ಹಂಚಿಕೊಂಡಿದ್ದಾರೆ, "ಕೆಎಲ್ ರಾಹುಲ್ ಟುನೈಟ್. 31 ಎಸೆತಗಳಲ್ಲಿ 53 ರನ್" ಎಂದು ಬರೆದ ನಂತರ "ಮತ್ತು ಈ ವ್ಯಕ್ತಿ" ಎಂಬ ಶೀರ್ಷಿಕೆಯೊಂದಿಗೆ ಕೆಂಪು ಹೃದಯದ ಎಮೋಜಿಯಿಂದ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಮತ್ತೆ ಅಬ್ಬರಿಸಿದ ರೋಹಿತ್‌ ಶರ್ಮಾ: ಫೀನಿಕ್ಸ್‌ನಂತೆ ಎದ್ದು ಸತತ ನಾಲ್ಕನೇ ಪಂದ್ಯ ಗೆದ್ದ ಮುಂಬೈ

MI vs SRH Match: ಬೋಲ್ಟ್‌ ದಾಳಿಗೆ ತತ್ತರಿಸಿದ ಹೈದರಾಬಾದ್‌: ಮುಂಬೈ ಗೆಲುವಿಗೆ 144 ರನ್‌ಗಳ ಗುರಿ

Pahalgam Terror Attack:ಚಿಯರ್‌ಲೀಡರ್ಸ್‌, ಪಟಾಕಿ ಸದ್ದಿಲ್ಲದೆ ನಡೆಯುತ್ತಿರುವ SRH vs MI ಪಂದ್ಯಾಟ

MI vs SRH Match: ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌, ಹೈದರಾಬಾದ್‌ಗೆ ಹೆಚ್ಚಿದ ಒತ್ತಡ

KL Rahul viral video: ಕೆಎಲ್ ರಾಹುಲ್, ಸಂಜೀವ್ ಗೊಯೆಂಕಾ ಭೇಟಿ: ಅವಮಾನ ಮಾಡಿದ್ಮೇಲೆ ಯಾವ ಮುಖ ಇಟ್ಕೊಂಡು ಬಂದ್ರಿ

ಮುಂದಿನ ಸುದ್ದಿ
Show comments