Select Your Language

Notifications

webdunia
webdunia
webdunia
webdunia

ಐಪಿಎಲ್ ನಾಕೌಟ್ ಸನ್ನಿವೇಶಗಳು: ಸನ್‌ರೈಸರ್ಸ್‌ ಪ್ಲೇಆಫ್ ಬಹುತೇಕ ಖಚಿತ

ಐಪಿಎಲ್ ನಾಕೌಟ್ ಸನ್ನಿವೇಶಗಳು:  ಸನ್‌ರೈಸರ್ಸ್‌ ಪ್ಲೇಆಫ್ ಬಹುತೇಕ ಖಚಿತ
ಹೈದರಾಬಾದ್ , ಮಂಗಳವಾರ, 17 ಮೇ 2016 (13:02 IST)
ಐಪಿಎಲ್ 2016ರ ರಾಯಲ್ ಚಾಲೆಂಜರ್ಸ್ ಮತ್ತು ನೈಟ್ ರೈಡರ್ಸ್ ನಡುವೆ 48ನೇ ಪಂದ್ಯದ ಬಳಿಕ ಯಾವ ತಂಡಗಳು ಪ್ಲೇಆಫ್ ಹಂತ ಮುಟ್ಟಬಹುದು ಮತ್ತು ಹೇಗೆ ಮುಟ್ಟುತ್ತವೆ ಎಂದು ಕೆಳಗೆ ನೀಡಲಾಗಿದೆ.
 
ಸನ್ ರೈಸರ್ಸ್ ಹೈದರಾಬಾದ್( ಪಾಯಿಂಟ್‌ಗಳು 16, +0.400)
ಆಡಲು ಉಳಿದಿರುವ ಪಂದ್ಯಗಳು
ವರ್ಸಸ್ ಡೆಲ್ಲಿ ಡೇರ್‌ಡೆವಿಲ್ಸ್, ರಾಯ್‌ಪುರ, 20 ಮೇ 2016
ವರ್ಸಸ್ ಕೋಲ್ಕತಾ ನೈಟ್ ರೈಡರ್ಸ್, ಕೋಲ್ಕತಾ, 22 ಮೇ 2016
ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲವು ಗಳಿಸಿದರೆ ಅದು ಖಂಡಿತವಾಗಿ ಟಾಪ್ 2ನಲ್ಲಿ ಉಳಿಯುತ್ತದೆ. ಉಳಿದಿರುವ 2 ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೆ, ಅದು ಪ್ಲೇಆಫ್‌ಗೆ ಅರ್ಹತೆ ಗಳಿಸುತ್ತದೆ ಮತ್ತು ಟಾಪ್ 2ನಲ್ಲಿ ಸ್ಥಾನ ಪಡೆಯುವ ಅವಕಾಶ ಹೊಂದಿರುತ್ತದೆ. ಅದರ ಸಕಾರಾತ್ಮಕ ನೆಟ್ ರನ್ ರೇಟ್ 0.400 ಇದಕ್ಕೆ ಕಾರಣ.
 
ಉಳಿದ ಎರಡು ಪಂದ್ಯಗಳನ್ನು ಸೋತರೂ ಸನ್‌ರೈಸರ್ಸ್ ಅರ್ಹತೆ ಪಡೆಯಬಹುದು. ಆದರೆ ಇತರೆ ಫಲಿತಾಂಶಗಳನ್ನು ಅದು ಅವಲಂಬಿಸಿದೆ. 
 
ಸನ್‌ರೈಸರ್ಸ್ ಎರಡು ಪಂದ್ಯಗಳಲ್ಲಿ ಸೋತು ನೆಟ್ ರನ್‌ ರೇಟ್‌ನಲ್ಲಿ ಕೆಟ್ಟ ಪ್ರದರ್ಶನ ನೀಡಿದರೆ ಮಾತ್ರ ಪ್ಲೇಆಫ್‌ನಿಂದ  ಹೊರಬೀಳಬಹುದು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ- ಡಿವಿಲಿಯರ್ಸ್ ಅಮೋಘ ಜತೆಯಾಟ: ನೈಟ್‌‌ರೈಡರ್ಸ್ ವಿರುದ್ಧ ರಾಯಲ್‌ಗೆ ಜಯ