Select Your Language

Notifications

webdunia
webdunia
webdunia
webdunia

ಕೊಹ್ಲಿ- ಡಿವಿಲಿಯರ್ಸ್ ಅಮೋಘ ಜತೆಯಾಟ: ನೈಟ್‌‌ರೈಡರ್ಸ್ ವಿರುದ್ಧ ರಾಯಲ್‌ಗೆ ಜಯ

ಕೊಹ್ಲಿ- ಡಿವಿಲಿಯರ್ಸ್ ಅಮೋಘ ಜತೆಯಾಟ: ನೈಟ್‌‌ರೈಡರ್ಸ್ ವಿರುದ್ಧ ರಾಯಲ್‌ಗೆ ಜಯ
ಕೋಲ್ಕತಾ , ಮಂಗಳವಾರ, 17 ಮೇ 2016 (11:43 IST)
ಕೋಲ್ಕತಾ: ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಎಡೆನ್‌ಗಾರ್ಡನ್ಸ್‌ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ, ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಜೀವಂತವಾಗಿರಿಸಿದರು.
 
 ಕೊಹ್ಲಿ ಮತ್ತು ಡಿವಿಲಿಯರ್ಸ್ ಕ್ರಮವಾಗಿ 75 ಮತ್ತು 59 ರನ್‌‌ಗಳಿಂದ ಅಜೇಯರಾಗಿ ಉಳಿದರು. ಕ್ರಿಸ್ ಗೇಲ್ 31 ಎಸೆತಗಳಲ್ಲಿ 49 ರನ್ ಕೊಡುಗೆ ನೀಡಿದರು. ಕೊಹ್ಲಿ-ಡಿ ವಿಲಿಯರ್ಸ್ ಜತೆಯಾಟದಲ್ಲಿ 115 ರನ್ ಸ್ಕೋರ್ ಮಾಡಲಾಯಿತು. ಕೊಹ್ಲಿ ಗೇಲ್ ಅವರು 2012ರಲ್ಲಿ ಮಾಡಿದ 733 ರನ್ ದಾಖಲೆಯನ್ನು ದಾಟಿ ಸಿಂಗಲ್ ಐಪಿಎಲ್ ಸೀಸನ್‌ನಲ್ಲಿ ಅತ್ಯಧಿಕ  ರನ್ ಸ್ಕೋರ್ ಮಾಡಿದ ಹಿರಿಮೆಗೆ ಪಾತ್ರರಾದರು.
 
ಬೆಂಗಳೂರು ಈ ಜಯದೊಂದಿಗೆ 12 ಪಂದ್ಯಗಳಲ್ಲಿ 6 ಜಯಗಳನ್ನು ಗಳಿಸಿದಂತಾಗಿದ್ದು ಪ್ಲೇಆಫ್ ಆಸೆ ಜೀವಂತವಿರಿಸಿದೆ.
 ಕೋಲ್ಕತಾದ 5 ವಿಕೆಟ್‌ಗೆ 183 ರನ್ ಚೇಸ್ ಮಾಡಿದ ಬೆಂಗಳೂರು ಪರ ಗೇಲ್ ಕೋಲ್ಕತಾ ಮೈದಾನದ ಎಲ್ಲಾ ಕಡೆಗೂ ಚೆಂಡನ್ನು ಅಟ್ಟಿದರು. 3ನೇ ಓವರಿನಲ್ಲಿ ರಸೆಲ್ ಬೌಲಿಂಗ್‌ನಲ್ಲಿ ಅವರು 17 ರನ್ ಗಳಿಸಿದರು. ಬಳಿಕ ಐದನೇ ಓವರಿನಲ್ಲಿ ಸುನಿಲ್ ನಾರಾಯಣ್ ಬೌಲಿಂಗ್‌ನಲ್ಲಿ ಸತತ ನಾಲ್ಕು ಬೌಂಡರಿಗಳನ್ನು ಸಿಡಿಸಿದರು. 6 ಓವರುಗಳಾಗಿದ್ದಾಗ ಬೆಂಗಳೂರು ತಂಡ 63ಕ್ಕೆ ವಿಕೆಟ್ ನಷ್ಟವಿಲ್ಲದೇ ಆಡಿತ್ತು. ಆದರೆ ಗೇಲ್ ಸುನಿಲ್ ನಾರಾಯಣ್ ಎಸೆತದಲ್ಲಿ ಎಲ್‌ಬಿಡಬ್ಲ್ಯುಗೆ ಔಟಾದರು.
 
 ಬೆಂಗಳೂರಿನ ನಾಯಕ ಕೊಹ್ಲಿ ಆಗಮಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ಕೊಹ್ಲಿ, ಕೊಹ್ಲಿ ಎಂಬ ಘೋಷಣೆ ಮೊಳಗಿತು. ಕೊಹ್ಲಿ ಕೂಡ ಅಭಿಮಾನಿಗಳನ್ನು ನಿರಾಶೆಗೊಳಿಸದೇ ಆಗಾಗ್ಗೆ ಬೌಂಡರಿಗಳನ್ನು ಸಿಡಿಸಿದರು. ಕೊಹ್ಲಿ ಸ್ಕೋರು 32 ಆಗಿದ್ದಾಗ ಗಂಭೀರ್ ಕ್ಯಾಚ್ ಬಿಟ್ಟಿದ್ದರಿಂದ ಒಂದು ಜೀವದಾನ ಸಿಕ್ಕಿತು. ಕೊಹ್ಲಿ-ಡಿ ವಿಲಿಯರ್ಸ್ ಜತೆಯಾಟದಿಂದ ರಾಯಲ್ ಚಾಲೆಂಜರ್ಸ್ 18.4 ಓವರುಗಳಲ್ಲಿ ಗುರಿಯನ್ನು ಮುಟ್ಟಿ 186 ರನ್ ಗಳಿಸಿತು. 
 
ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ನೈಟ್ ರೈಡರ್ಸ್ ಪರ ಗಂಭೀರ್(51) ಮತ್ತು ಮನೀಶ್ ಪಾಂಡೆ(50) ಅವರ ಅರ್ಧಶತಕಗಳು ಮತ್ತು ರಸೆಲ್  19 ಎಸೆತಗಳಲ್ಲಿ 39 ರನ್ ಸಿಡಿಸಿದ್ದರಿಂದ 5 ವಿಕೆಟ್‌ ಕಳೆದುಕೊಂಡು 183 ರನ್ ಗಳಿಸಿತು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

 


Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯೋಗಾಕಾಂಕ್ಷಿ ಭಾರತೀಯ ಯುವತಿ ಮೇಲೆ ದುಬೈನಲ್ಲಿ ಅತ್ಯಾಚಾರ