ಯುಎಇನಲ್ಲಿ ಪಾಕಿಸ್ತಾನದ ಮ್ಯಾನೇಜರ್ ಒಬ್ಬ 19 ವರ್ಷ ವಯಸ್ಸಿನ ಭಾರತೀಯ ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಆರೋಪ ಎದುರಿಸಿದ್ದಾನೆ.
33 ವರ್ಷ ವಯಸ್ಸಿನ ಪಾಕಿಸ್ತಾನ ಮ್ಯಾನೇಜರ್ ದುಬೈನ ಸ್ಥಿರಾಸ್ತಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಉದ್ಯೋಗಾಕಾಂಕ್ಷಿ ಯುವತಿಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ ತನ್ನ ಫ್ಲಾಟ್‌ಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆಂದು ಆರೋಪಿಸಲಾಗಿದೆ. ಯುವತಿಗೆ ಕಂಪ್ಯೂಟರ್ ಕೌಶಲ್ಯಗಳ ಬಗ್ಗೆ ತರಬೇತಿ ನೀಡಬೇಕೆಂದು ಹೇಳಿ ತನ್ನ ನಿವಾಸಕ್ಕೆ ಕರೆಸಿಕೊಂಡಿದ್ದ.
ಮಹಿಳೆ ಅಂತರ್ಜಾಲದಲ್ಲಿ ಉದ್ಯೋಗಕ್ಕಾಗಿ ಹುಡುಕುತ್ತಿದ್ದಾಗ ಎಎನ್ ಎಂಬ ಮೊದಲಕ್ಷರಗಳೊಂದಿಗೆ ಗುರುತಿಸಿಕೊಂಡ ವ್ಯಕ್ತಿಯ ಸಂಪರ್ಕ ಸಿಕ್ಕಿತು. ತಮ್ಮ ಕಂಪನಿಗೆ ಕಾರ್ಯದರ್ಶಿ ಬೇಕೆಂದು ಅವನು ಹೇಳಿದ್ದ.
ಯುವತಿಯು ದುಬೈನ ಅಲ್ ರಷೀಡಿಯಾ ಸ್ಥಳದಲ್ಲಿ ಎಎನ್ ಜತೆ ಭೇಟಿಗೆ ಒಪ್ಪಿದಳು. ಎಎನ್ ಅವಳನ್ನು ದುಬೈ ಮೂಲದ ಕಂಪನಿಯೆಂದು ಹೇಳಿ ಅವನ ಫ್ಲಾಟ್‌ಗೆ ಕರೆದೊಯ್ದಿದ್ದ.
ಅಲ್ಲಿ ಎಎನ್ ಯುವತಿಯನ್ನು ಮಲಗುವ ಕೋಣೆಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಎಂದು ಪ್ರಾಸಿಕ್ಯೂಟರ್‌ಗಳು ಆಪಾದಿಸಿದ್ದು, ಮೇ 26 ರಂದು ಈ ಕುರಿತು ತೀರ್ಪು ಹೊರಬೀಳಲಿದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.