IPL 2025: ಗೋಯಂಕಾಗೆ ಚಮಕ್‌ ಕೊಡ್ತಾರಾ ರಾಹುಲ್‌, ಡೆಲ್ಲಿ ವಿರುದ್ಧ ಮುಯ್ಯಿ ತೀರಿಸುತ್ತಾ ಲಖನೌ

Sampriya
ಮಂಗಳವಾರ, 22 ಏಪ್ರಿಲ್ 2025 (15:00 IST)
Photo Courtesy X
ಲಖನೌ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಇಂದಿನ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡವು ತನ್ನ ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ.

ಈ ಪಂದ್ಯದ ವಿಶೇಷವೆಂದರೆ ಕಳೆದ ಬಾರಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ರಿಷಭ್‌ ಪಂತ್‌ ಈ ಬಾರಿ ಲಖನೌ ತಂಡದ ನಾಯಕರಾಗಿದ್ದಾರೆ. ಕಳೆದ ಬಾರಿ ಲಖನೌ ತಂಡದ ಸಾರಥಿಯಾಗಿದ್ದ ಕನ್ನಡಿಗ ಕೆ.ಎಲ್‌. ರಾಹುಲ್‌ ಈಗ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿದ್ದಾರೆ.

ಕಳೆದ ಬಾರಿ ಲಖನೌ ತಂಡ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಮೈದಾನದಲ್ಲೇ ಮಾಲೀಕ ಸಂಜೀವ್‌ ಗೋಯಾಂಕಾ ಅವರು ರಾಹುಲ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ನಂತರದ ರಾಹುಲ್‌ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಮೆಗಾ ಹರಾಜಿನಲ್ಲಿ ಬರೋಬ್ಬರಿ ₹27 ಕೋಟಿಗೆ ಪಂತ್‌ ಅವರನ್ನು ಲಖನೌ ತಂಡ ಖರೀದಿಸಿತ್ತು. ಆದರೆ, ಪಂತ್‌ ಈ ಬಾರಿ ರನ್‌ ಬರ ಎದುರಿಸುತ್ತಿದ್ದಾರೆ. ಡೆಲ್ಲಿ ತಂಡವು ₹14 ಕೋಟಿಗೆ ರಾಹುಲ್‌ ಅವರನ್ನು ಖರೀದಿ ಮಾಡಿತ್ತು. ಅವರು ಉತ್ತಮ ಲಯದಲ್ಲಿದ್ದಾರೆ.

ಕೆಲ ವಾರಗಳ ಹಿಂದೆ ಇದೇ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯಕ್ಕೆ ರಾಹುಲ್‌ ಅಲಭ್ಯರಾಗಿದ್ದರು. ಆ ಪಂದ್ಯವನ್ನು ಡೆಲ್ಲಿ ತಂಡವನ್ನು ರೋಚಕವಾಗಿ ಒಂದು ವಿಕೆಟ್‌ನಿಂದ ಗೆದ್ದಿತ್ತು. ಇದೀಗ ಲಖನೌ ತಂಡವು ಸೋಲಿನ ಮುಯ್ಯಿ ತೀರಿಸಲು ಸಜ್ಜಾಗಿದೆ.
 <>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ಗಾಗಿ ಸೂರ್ಯ ಕುಮಾರ್ ಯಾದವ್ ತಾಯಿ ಪೂಜೆ: ಎಂಥಾ ಅನುಬಂಧ

IND vs AUS T20: ಮಳೆಗೆ ಕೊಚ್ಚಿ ಹೋದ ಮೊದಲ ಟಿ20

IND vs AUS T20: ಟಾಸ್ ಗೆದ್ದ ಆಸ್ಟ್ರೇಲಿಯಾ, ಮತ್ತೆ ಹರ್ಷಿತ್ ರಾಣಾಗೆ ಜೈ ಎಂದ ಗಂಭೀರ್

ರೋಹಿತ್ ಶರ್ಮಾ ಈಗ ವಿಶ್ವ ನಂ 1: ವಯಸ್ಸಾಯ್ತು ಎಂದವರಿಗೆ ತಕ್ಕ ತಿರುಗೇಟು ಕೊಟ್ಟ ಹಿಟ್ ಮ್ಯಾನ್

ಶ್ರೇಯಸ್ ಅಯ್ಯರ್ ನಿಂದ ಸದ್ಯದಲ್ಲೇ ಸಿಗಲಿದೆ ಸರ್ಪೈಸ್: ಬಿಸಿಸಿಐ

ಮುಂದಿನ ಸುದ್ದಿ
Show comments