Webdunia - Bharat's app for daily news and videos

Install App

IPL 2025: ಎರಡು ಜೀವದಾನದ ಲಾಭ ಪಡೆದು ಮುಂಬೈ ತಂಡವನ್ನು ಕ್ವಾಲಿಫೈಯರ್‌ಗೆ ಕೊಂಡೊಯ್ದ ರೋಹಿತ್‌ ಶರ್ಮಾ

Sampriya
ಶನಿವಾರ, 31 ಮೇ 2025 (00:10 IST)
Photo Courtesy X
ಚಂಡೀಗಢ: ಎರಡು ಜೀವದಾನದ ಲಾಭ ಪಡೆದ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ಅವರು ಅಬ್ಬರ ಬ್ಯಾಟಿಂಗ್‌ ಮೂಲಕ ಮುಂಬೈ ಇಂಡಿಯನ್ಸ್‌ ತಂಡವನ್ನು ಎರಡನೇ ಕ್ವಾಲಿಫೈಯರ್‌ಗೆ ಮುನ್ನೆಸಿದರು. 

ಚಂಡೀಗಢದ ಮುಲ್ಲನ್ ಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 20 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಆ ಮೂಲಕ ಹಾಲಿ ಟೂರ್ನಿಯಲ್ಲಿ ಕ್ವಾಲಿಫೈಯರ್ 2ನಲ್ಲಿ ಪಂಜಾಬ್‌ ಕಿಂಗ್ಸ್‌ ಜೊತೆ ಸೆಣಸಲಿದೆ. ಅದರಲ್ಲಿ ಗೆದ್ದ ತಂಡ ಜೂನ್‌ 3ರಂದು ಫೈನಲ್‌ನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ. 

ರೋಹಿತ್‌ ಶರ್ಮಾ ಅವರ ಎರಡು ಸುಲಭ ಕ್ಯಾಚನ್ನು ಕೈಚೆಲ್ಲಿದ ಗುಜರಾತ್‌ ಫೀಲ್ಡರ್‌ಗಳು ಭಾರೀ ಬೆಲೆಯನ್ನು ತೆರೆಬೇಕಾಯಿತು. ಇದರ ಲಾಭ ಪಡೆದ ರೋಹಿತ್‌ ಶರ್ಮಾ ಕೇವಲ 50 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 81 ರನ್ ಸಿಡಿಸಿದರು. ಹೀಗಾಗಿ, ಮುಂಬೈ ತಂಡ 228 ರನ್‌ ಗಳಿಸಿತು. 

ಮುಂಬೈ ನೀಡಿದ್ದ 229 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 20 ರನ್ ಗಳ ಅಂತರದಲ್ಲಿ ಸೋಲುಕಂಡಿತು. ಇದರೊಂದಿಗೆ ಶುಭಮನ್‌ ಗಿಲ್‌ ಪಡೆ ಟೂರ್ನಿಯಿಂದ ಹೊರಬಿತ್ತು.

ರೋಹಿತ್ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಎರಡು ದಾಖಲೆಗಳನ್ನು ನಿರ್ಮಿಸಿದರು. ರೋಹಿತ್ ಶರ್ಮಾ ಐಪಿಎಲ್ ನಲ್ಲಿ 7000 ರನ್ ಗಳಿಸಿದ ದಾಖಲೆ ಬರೆದರು. ರೋಹಿತ್ ಶರ್ಮಾ ಒಟ್ಟು 271 ಪಂದ್ಯಗಳಿಂದ 2 ಶತಕ ಮತ್ತು 47 ಅರ್ಧಶತಕಗಳ ಸಹಿತ 7038 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಆರ್ ಸಿಬಿಯ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, ಕೊಹ್ಲಿ 8618 ರನ್ ಗಳಿಸಿದ್ದಾರೆ. ರೋಹಿತ್ 7038 ರನ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ಈ ಪಂದ್ಯದಲ್ಲಿ ರೋಹಿತ್ 4 ಸಿಕ್ಸರ್ ಸಿಡಿಸಿದ್ದು ಆ ಮೂಲಕ ಐಪಿಎಲ್ ನಲ್ಲಿ ತಮ್ಮ ಸಿಕ್ಸರ್ ಗಳ ಗಳಿಕೆಯನ್ನು 302ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ವಿಂಡೀಸ್‌ನ ಕ್ರೀಸ್‌ಗೇಲ್‌ ಒಟ್ಟು 357 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಇದೀಗ ರೋಹಿತ್ ಶರ್ಮಾ 2ನೇ ಸ್ಥಾನಕ್ಕೇರಿದ್ದಾರೆ. 3ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು ಕೊಹ್ಲಿ ಒಟ್ಟು 291 ಸಿಕ್ಸರ್ ಸಿಡಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru stampede: ಮೊನ್ನೆಯಷ್ಟೇ ಕೊಹ್ಲಿ ಜೊತೆ ಸುತ್ತಾಟ, ಇಂದು ಪೊಲೀಸರ ಜೊತೆ ಅಲೆದಾಟ

Bengaluru Stampede: ಮೃತರ ಕುಟುಂಬಗಳಿಗೆ ಆರ್‌ಸಿಬಿ ತಲಾ ₹1ಕೋಟಿ ಪರಿಹಾರ ನೀಡಲು ಹೆಬ್ಬಾಳಕರ ಒತ್ತಾಯ

RCB: ಆರ್ ಸಿಬಿ ಮಾಲಿಕರು ನಿಜಕ್ಕೂ ಯಾರು, ತಂಡಕ್ಕೆ ಈ ಹೆಸರು ಬಂದಿದ್ದು ಹೇಗೆ ಇಲ್ಲಿದೆ ವಿವರ

Nikhil Sosale: ಅನುಷ್ಕಾ ಶರ್ಮಾಗೆ ಅಂಟಿಕೊಂಡೇ ಇದ್ದರು ಅರೆಸ್ಟ್ ಆಗಿರುವ ನಿಖಿಲ್ ಸೋಸಲೆ ಪತ್ನಿ

Gautam Gambhir: ಪೆಟ್ರೋಲ್ ಬಂಕ್ ಫೀಲ್ ಬರ್ತಾ ಇದ್ಯಲ್ಲೋ.. ಟ್ರೋಲ್ ಆಯ್ತು ಟೀಂ ಇಂಡಿಯಾ ಹೊಸ ಜೆರ್ಸಿ

ಮುಂದಿನ ಸುದ್ದಿ
Show comments