Webdunia - Bharat's app for daily news and videos

Install App

IPL 2025 Final: 18 ವರ್ಷಗಳ ಕನಸು ನನಸಾದ ಸಂಭ್ರಮದಲ್ಲಿ ಮೈದಾನದಲ್ಲೇ ವಿರಾಟ್‌ ಕೊಹ್ಲಿ ಕಣ್ಣೀರು

Sampriya
ಬುಧವಾರ, 4 ಜೂನ್ 2025 (00:17 IST)
Photo Courtesy X
ಅಹಮದಾಬಾದ್‌: ಆರ್‌ಸಿಬಿ ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರ ಕನಸು ಕೊನೆಗೂ ನನಸಾಗಿದೆ. ಟಿ20 ವಿಶ್ವಕಪ್‌, ಏಕದಿನ ವಿಶ್ವಕಪ್‌ ಗೆದ್ದ ತಂಡದಲ್ಲಿದ್ದ ವಿರಾಟ್‌ಗೆ ಈತನಕ ಐಪಿಎಲ್‌ ಕಪ್‌ ಒಲಿದಿರಲಿಲ್ಲ. ಆದರೆ, ಈ ಬಾರಿ ಫೈನಲ್‌ನಲ್ಲಿ ಜಯಿಸುತ್ತಿದ್ದಂತೆ ವಿರಾಟ್‌ ಅವರು ಮೈದಾನದಲ್ಲೇ ಆನಂದಬಾಷ್ಪ ಸುರಿಸಿದರು. 

ಪಂದ್ಯ ಮುಗಿಯುವವರೆಗೆ ಭಾವನೆಗಳನ್ನು ಹಿಡಿದಿಟ್ಟುಕೊಂಡಿದ್ದ ವಿರಾಟ್‌ ಕೊಹ್ಲಿ ಅವರು ಗೆಲುವು ಸಾಧಿಸುತ್ತಿದ್ದಂತೆ ಮೈದಾನದಲ್ಲೇ ಕುಳಿತು ಕಣ್ಣೀರು ಹಾಕಿದರು. ಉಳಿದ ಆಟಗಾರರು ಅವರು ಅಭಿನಂದಿಸಿದರು.  ಪತ್ನಿ ಅನುಷ್ಕಾ ಕೂಡಾ ವಿರಾಟ್‌ ಅವರನ್ನು ಅಭಿನಂದಿಸಿದರು. 18 ವರ್ಷಗಳಿಂದ ಆರ್‌ಸಿಬಿ ತಂಡಕ್ಕೆ ಆಡುತ್ತಿರುವ ವಿರಾಟ್‌ ಕೊನೆಗೂ ಐಪಿಎಲ್‌ ಕಪ್‌ ಅನ್ನು ಹಿಡಿದು ಸಂಭ್ರಮಿಸಿದರು. 

ತಂಡದ ನಾಯಕ ರಜತ್‌ ಪಾಟೀದಾರ್‌ ಅವರು ಈ ಬಾರಿ ವಿರಾಟ್‌ ಕೊಹ್ಲಿಅವರಿಗಾಗಿ ಕಪ್‌ ಗೆಲ್ಲುತ್ತೇವೆ ಎಂದು ಪ್ರಮಾಣ ಮಾಡಿದ್ದರು. ಇದೀಗ ತಂಡವು ಸಾಂಘಿಕ ಪ್ರದರ್ಶನ ನೀಡಿ ಕಪ್‌ ಗೆದ್ದಿದ್ದು, ವಿರಾಟ್‌ ಕೊಹ್ಲಿ ಅವರಿಗೆ ಅರ್ಪಿಸಿದೆ. ವಿರಾಟ್‌ ಕೊಹ್ಲಿ ಅವರು ಈ ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಇದು ತಂಡದ ಗೆಲುವಲ್ಲ, ಅಭಿಮಾನಿಗಳ ಗೆಲುವು ಎಂದು ಅಭಿಮಾನದಿಂದ ಹೇಳಿದರು.

ಮಂಗಳವಾರ ರಾತ್ರಿ ನಡೆದ ರೋಚಕ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಣಿಸಿ 18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. 

ಆರ್ ಸಿಬಿ ನೀಡಿದ 191 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪಂಜಾಬ್ ಪರ  ಶಶಾಂಕ್ ಸಿಂಗ್, ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ ಅಜೇಯ 61 ರನ್ ಗಳಿಸಿ ಏಕಾಂಗಿ ಹೋರಾಟ ನಡೆದರು. 

 <>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿವೃತ್ತಿ ವದಂತಿಗಳಿಗೆ ಒಂದೇ ಕೆಲಸದಿಂದ ಉತ್ತರ ಕೊಟ್ಟ ರೋಹಿತ್ ಶರ್ಮಾ

ಇಂಗ್ಲೆಂಡ್‌ನಲ್ಲಿ ರನ್‌ಹೊಳೆ ಹರಿಸಿದ ಯುವರಾಜ ಶುಭಮಲ್‌ ಗಿಲ್‌ಗೆ ಮತ್ತೊಂದು ಜವಾಬ್ದಾರಿ ನೀಡಲು ಸಿದ್ಧತೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಒಂದು ವಿದಾಯ ಪಂದ್ಯವಾಡುವ ಹಕ್ಕೂ ಇಲ್ವೇ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಿಸಿಸಿಐ ಷರತ್ತೇನು

ಹೊಟ್ಟೆಯಿಂದಾಗಿ ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ

ಮುಂದಿನ ಸುದ್ದಿ
Show comments